ಬಾಲಿವುಡ್‌ನ ದಬಂಗ್ ಹುಡುಗಿ ಸೋನಾಕ್ಷಿ ಸಿನ್ಹಾ ಮನೆಗೆ ಮುದ್ದಾದ ಹೊಸ ಅತಿಥಿ ಬಂದಿದ್ದಾರೆ. ಈ ಅತಿಥಿಯ ಹೆಸರು 'ಬ್ರಾಂನ್ಜ್'. ಸದ್ದಿಲ್ಲದೇ ಮನೆಗೆ ಕರೆತಂದ ಈ ಮುದ್ದಿನ ಅತಿಥಿಯ ಫೋಟೋ ಸದ್ಯ ಎಲ್ಲೆಡೆವೈರಲ್ ಆಗುತ್ತಿದೆ.

ಹೌದು ಸೋನಾಕ್ಷಿ ಸಿನ್ಹಾ ಮನೆಗೆ ಬಂದ ಆ ಹೊಸ ಅತಿಥಿ ಬೇರಾರೂ ಅಲ್ಲ ಆಕೆ ಬಹಳ ಇಷ್ಟ ಪಡುವ ನಾಯಿ ಮರಿ. ಈ ಮರಿಯ ಮೊದಲ ಫೋಟೋ ನಟಿ ತಮ್ಮ ಇನ್ಸ್ಟಾ ಗ್ರಾಂ ಪೇಜ್‌ಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋ ಮತ್ರವಲ್ಲದೇ ಸೋನಾಕ್ಷಿ ಮುದ್ದಿನ ಬ್ರಾನ್ಜ್ ಜೊತೆ ವಿಡಿಯೋ ಕೂಡಾ ಶೇರ್ ಮಾಡಿಕೊಂಡಿದ್ದಾರೆ.

ಸದ್ಯ ಇದನ್ನು ಅವರ ಫ್ಯಾನ್ ಪೇಜ್ ಕೂಡಾ ಶೇರ್ ಮಾಡಿಕೊಂಡಿದೆ. ಮುದ್ದಿನ ಬ್ರಾನ್ಜ್ ನ್ನು ಎಲ್ಲಾ ಅಭಿಮಾನಿ ಹಾಗೂ ಬಾಲಿವುಡ್ ಸ್ಟಾರ್‌ಗಳು ತುಂಬಾ ಪ್ರೀತಿಯಿಂದ ಸ್ವಾಗತಿಸಿದ್ದಾರೆ.

 
 
 
 
 
 
 
 
 
 
 
 
 

Sona with her new baby bronze @aslisona👸🏼🐶❤️

A post shared by Sonakshi Sinha🌟️👑💎 (@sonakshi.princess) on Nov 27, 2018 at 10:44am PST

ನಾಯಿಗಳೆಂದರೆ ಸೋನಾಕ್ಷಿಗೆ ಅತ್ಯಂತ ಹೆಚ್ಚು ಪ್ರೀತಿ ಬ್ರಾಂನ್ಜ್ ಅವರ ಮನೆಗೆ ಬಂದ ಮೊದಲ ನಾಯಿಯಲ್ಲ. 14 ವರ್ಷಗಳವರೆಗೆ ನ್ಯಾನ್ಸಿ ಹೆಸರಿನ ನಾಯಿ ಅವರ ಮನೆಯಲ್ಲಿತ್ತು. ಇನ್ನು PETA ಸಂಸ್ಥೆ ಪರವಾಗಿಯೂ ಸೋನಾಕ್ಷಿ ಪ್ರಚಾರ ಮಾಡುತ್ತಾರೆ.