ಸೋನಾಕ್ಷಿ ಸಿನ್ಹಾ ಯಶಸ್ಸಿನ ಮಂತ್ರವೇನು ಗೊತ್ತಾ?

First Published 23, May 2018, 5:15 PM IST
Sonakshi Sinha Fitness Tips
Highlights

ಸೋನಾಕ್ಷಿ ಸಿನ್ಹಾ ಇನ್ನು ಫುಲ್ ಡಿಫರೆಂಟಾಗಿ ಕಾಣಿಸ್ಕೋತಾರೆ. ಮೈ ಮಾಟದಿಂದ ಹಿಡಿದು, ಮಾಡುವ ಕೆಲಸ ಶೈಲಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗಲಿವೆ. ಇದಕ್ಕಾಗಿ ಈಗಾಗಲೇ ಸೋನಾಕ್ಷಿ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.  

ಸೋನಾಕ್ಷಿ ಸಿನ್ಹಾ ಇನ್ನು ಫುಲ್ ಡಿಫರೆಂಟಾಗಿ ಕಾಣಿಸ್ಕೋತಾರೆ. ಮೈ ಮಾಟದಿಂದ ಹಿಡಿದು, ಮಾಡುವ ಕೆಲಸ ಶೈಲಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗಲಿವೆ. ಇದಕ್ಕಾಗಿ ಈಗಾಗಲೇ ಸೋನಾಕ್ಷಿ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.

‘ನಾನು ನನ್ನ ಮಿತಿಗಳನ್ನು ದಾಟಿ ಕೆಲಸ ಮಾಡಬೇಕು. ಅದಕ್ಕಾಗಿ ನನ್ನ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಆಕರ್ಷಕ ಮೈಮಾಟ ಹೊಂದಬೇಕು. ಅದಕ್ಕಾಗಿಯೇ ಸಾಕಷ್ಟು ವ್ಯಾಯಾಮ, ನಿಯಮಿತ ಡಯಟ್‌ನಲ್ಲಿ ತೊಡಗಿದ್ದೇನೆ. ದಿನ ಪೂರ್ತಿ ಕೆಲಸ ಮಾಡಿ ಸಂಜೆಯಾದಾಗ ಏನೋ  ಸಂತೋಷವಾಗುತ್ತದೆ. ಆ ಸಂತೋಷ ನಿತ್ಯವೂ ಹೆಚ್ಚುತ್ತಾ ಹೋಗಬೇಕು. ಆಗಲೇ ಯಶಸ್ಸು ಸಿಕ್ಕುವುದು’ ಎಂದೆಲ್ಲಾ  ಹೇಳಿಕೊಂಡಿದ್ದಾರೆ.

ಮೊದಲಿನಿಂದಲೂ ಸೋನಾ ಡಯಟ್, ವ್ಯಾಯಾಮದಲ್ಲಿ ತೊಡಗಿಕೊಂಡಿದ್ದರು ಎನ್ನುವುದು ಗೊತ್ತಿದ್ದ ಸಂಗತಿಯೇ. ಆದರೆ ಈಗ ಮತ್ತಷ್ಟು ಹುರುಪು ಬಂದವರಂತೆ ‘ನನ್ನ ಗುರಿ ನನ್ನ ಮಿತಿಗಳನ್ನು ಪ್ರತಿದಿನವೂ ಮೀರುವುದೇ ಆಗಿದೆ. ಅದಕ್ಕಾಗಿಯೇ ನಿತ್ಯವೂ ಸಾಕಷ್ಟು ಶ್ರಮ ಹಾಕುತ್ತಿದ್ದೇನೆ’ ಎಂದು ಹೇಳಿಕೊಂಡು ಮುಂದೆ ಇನ್ನೂ ಆಟ ಸಾಕಷ್ಟು ಬಾಕಿ ಇದೆ ನೋಡಿ ಎಂದು ಹೇಳಿದ್ದಾರೆ.

ಸೋನಾಕ್ಷಿಯ ಈ ಎಲ್ಲಾ ಪರಿಶ್ರಮಗಳ ಫಲ ಮುಂದೆ ಹೇಗೆಲ್ಲಾ ಕಾಣಿಸಿಕೊಳ್ಳಲಿದೆ, ಈಗಲೇ ಮೀನಿನಂತಿರುವ ಸೋನ ಮುಂದೆ ಇನ್ಯಾವ ರೀತಿಯಲ್ಲಿ ಮೋಡಿ ಮಾಡಲಿದ್ದಾರೆ ಎನ್ನುವ ಕುತೂಹಲವನ್ನಿಟ್ಟುಕೊಂಡು ಕಾಯಬೇಕೀಗ.  

loader