ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಭಿಪ್ರಾಯಪಟ್ಟಿದೆ.

ಈ ಎಕ್ಸಿಟ್ ಪೋಲ್ ಬಗ್ಗೆ ಜನ ಎಕ್ಸೈಟ್ ಆಗಿದ್ದಾರೆ. ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಕೆಲವರು ಪರ ಮಾತನಾಡಿದರೆ ಇನ್ನು ಕೆಲವರು ವಿರೋಧವಾಗಿ ಮಾತನಾಡುತ್ತಿದ್ದಾರೆ. ಒಂದಷ್ಟು ಟ್ರೋಲ್ ಗಳು ಆಗುತ್ತಿವೆ. ಎಕ್ಸಿಟ್ ಪೋಲ್ ಬಗ್ಗೆ ಐಶ್ವರ್ಯಾ ರೈ, ಸಲ್ಮಾನ್ ಖಾನ್ ಹಾಗೂ ವಿವೇಕ್ ಒಬೆರಾಯ್ ಇಟ್ಟುಕೊಂಡು ಟ್ರೋಲ್ ಮಾಡಿದ್ದಾರೆ. 

ಐಶ್ವರ್ಯಾ ರೈ ಮೊದಲು ಸಲ್ಮಾನ್ ಖಾನ್ ಜೊತೆ ಪ್ರೇಮಪಾಶದಲ್ಲಿ ಬಿದ್ದಿದ್ದರು. ಇಬ್ಬರೂ ಸುತ್ತಾಡುತ್ತಿದ್ದರು. ಇನ್ನೇನೂ ಮದುವೆಯಾಗುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಅದೇನಾಯ್ತೋ ಏನೋ ಇಬ್ಬರೂ ಕಭಿ ಅಲ್ವಿದಾ ಕೆಹನಾ ಎಂದು ದೂರವಾದರು. 

ನಂತರ ಐಶ್ವರ್ಯಾ ವಿವೇಕ್ ಒಬೆರಾಯ್ ಜೊತೆ ಕಾಣಿಸಿಕೊಂಡರು. ಇಬ್ಬರೂ ಮದುವೆಯಾಗಿಯೇ ಬಿಡುತ್ತಾರೆ ಎಂಬ ಮಾತು ಬಿ ಟೌನ್ ನಲ್ಲಿ ಕೇಳಿ ಬಂದಿತ್ತು. ಆದರೆ ಇಬ್ಬರ ನಡುವೆ ಕುಚ್ ಕುಚ್ ಆಗಿ ಕೊನೆಗೆ ಬೇರೆಯಾದರು.  ಕೊನೆಗೆ ಐಶ್ವರ್ಯಾ ರೈ ಅಭಿಶೇಕ್ ಜೊತೆ ಮದುವೆಯಾದರು. 

ಅಂದರೆ ಸಾರ್ವಜನಿಕ ಅಭಿಪ್ರಾಯ ಒಂದಿರುತ್ತದೆ. ಎಕ್ಸಿಟ್ ಪೋಲ್ ಇನ್ನೊಂದಾಗಿರುತ್ತೆ. ಅಂತಿಮ ಫಲಿತಾಂಶ ಮಾತ್ರ ಬೇರೆಯದ್ದೇ ಆಗುತ್ತದೆ ಎಂಬುದನ್ನು ಬಹಳ ಚೆನ್ನಾಗಿ ಈ ಟ್ರೋಲ್ ನಲ್ಲಿ ಹೇಳಿದ್ದಾರೆ. 

ಈ ಟ್ರೋಲ್ ಗೆ ವಿವೇಕ್ ಒಬೆರಾಯ್ ಉತ್ತರಿಸಿದ್ದು, ‘ಹಹಹಹ... ಕ್ರಿಯೇಟಿವ್ ಆಗಿದೆ. ಇದರಲ್ಲಿ ಯಾವುದೇ ಪಾಲಿಟಿಕ್ಸ್ ಇಲ್ಲ... ಇದು ಜೀವನ‘ ಎಂದಿದ್ದಾರೆ.