ಬ್ಯೂಟಿ ಆ್ಯಂಡ್ ಬೋಲ್ಡ್ ದಿಶಾ ಮದನ್ ಬೇಬಿ ಬಂಪ್ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕಿರುತೆರೆ ಖ್ಯಾತ ಧಾರಾವಾಹಿ ‘ಕುಲವಧು’ ಮೂಲಕ ಜರ್ನಿ ಶುರು ಮಾಡಿದ ದಿಶಾ ಮದನ್ ಈಗ ಆನ್‌ಲೈನ್‌ ಜಗತ್ತಿನ ನಾಯಕಿ. ಕೆಲ ತಿಂಗಳುಗಳ ಹಿಂದೆ ಮೈಸೂರಿನ ತಮ್ಮ ನಿವಾಸದಲ್ಲಿ ಸಾಂಪ್ರದಾಯಿಕವಾಗಿ ಸೀಮಂತ ಮಾಡಿಕೊಂಡರು. ಆನಂತರ ಮಾಡಿಸಿದ ಫೋಟೋಶೂಟ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಸಾಂಪ್ರದಾಯಿಕ ಸೀಮಂತದಲ್ಲಿ ಮಿಂಚಿದ ಕಿರುತೆರೆ ನಟಿ!

ಮಾಡರ್ನ್ ಆ್ಯಂಡ್ ಟ್ರೆಂಡಿ ಇದ್ದರೂ ಸಾಂಪ್ರದಾಯಿಕವಾಗಿ ಸೀಮಂತ ಮಾಡಿಕೊಂಡಿದ್ದಾರೆ ಎಂದು ಹಲವಾರು ಮಂದಿ ಮಾತನಾಡುತ್ತಿದ್ದರು. ಈಗ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮತ್ಸ್ಯಕನ್ಯೆ ಹಾಗೂ ಸೆಕ್ಸಿ ಮಾಮ್ ರೀತಿ ಶೂಟ್ ಮಾಡಿಸಿದ್ದಾರೆ.

ತಮ್ಮ ಪ್ರೆಗ್ನೆನ್ಸಿ ಫೋಟೋಗಳನ್ನು ಸೀರಿಸ್ ರೀತಿಯಲ್ಲಿ ಅಪ್ಲೋಡ್ ಮಾಡುತ್ತಿದ್ದು ಪ್ರತಿ ಫೋಟೊಗಳಿಗೆ ಪ್ರೆಗ್ನೆನ್ಸಿ ಬಗ್ಗೆ ಇರುವ ಉಹಾಪೋಹಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮೊದಲ ಫೋಟೋದಲ್ಲಿ 'ಮೊದಲ ಮಗು ಎಂದಾಕ್ಷಣ ಎಲ್ಲರೂ ತಮ್ಮ ಸಲಹೆ ನೀಡುತ್ತಾರೆ. ಆದರೆ ಅದರಿಂದ ತಲೆಕೆಡಿಸಿಕೊಂಡು ಗಾಬರಿ ಆಗುವ ಅವಶ್ಯಕತೆ ಇಲ್ಲ. ಸಮಯ ಸಿಕ್ಕಾಗ ಪುಸ್ತಕ ಓದಿ ಇಲ್ಲವಾದರೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ. ನಿಧಾನವಾಗಿ ನಿಮ್ಮನ್ನು ನೀವು ತಯಾರಿ ಮಾಡಿಕೊಳ್ಳಿ. ಒತ್ತಡ ಆದರೆ ದೀರ್ಘ ಉಸಿರಾಟದ ವ್ಯಾಯಾಮ ಮಾಡಿ' ಎಂದು ಬರೆದುಕೊಂಡಿದ್ದಾರೆ.

View post on Instagram

ಸೀರಿಸ್ ಮತ್ತೊಂದು ಫೋಟೋದಲ್ಲಿ ದೇಹ ಹೇಗೆ ಬದಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ತನ್ನ ಓಪನ್ ಮೈಂಡ್ ಯೋಚನೆಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಕ್ಕೆ ಬರುವ ಮಹಿಳೆಯರಿಗೆ ಪಾಸಿಟಿವ್ ಶಕ್ತಿ ಹರಡುತ್ತಿದ್ದಾರೆ.

View post on Instagram