ಬೆಂಗಳೂರು (ಜು.6): 'ವಠಾರ' ಧಾರಾವಾಹಿ ಮೂಲಕ ನಟನಾ ವೃತ್ತಿಗಿಳಿದು, ಸುಮಾರು 100 ಚಿತ್ರಗಳಲ್ಲಿ ನಟಿಸಿದ್ದ ಹಾಸ್ಯನಟ ಮಲ್ಲೇಶ್ ಜು.6ರಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಕಿಡ್ನಿ ಫೈಲೂರ್ ಹಾಗೂ ಸ್ಟ್ರೋಕ್‌ನಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು, ಮನೆಗೆ ಕಳುಹಿಸಲಾಗಿತ್ತು. ಆನೇಕಲ್‌ನಲ್ಲಿರುವ ತಮ್ಮ ಮನೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ನಟ ದರ್ಶನ್  ಅವರ ಅಭಿಮಾನಿಯಾಗಿದ್ದ ಮಲ್ಲೇಶ್, ತಮ್ಮ ಜೀವನದ ಕಡೇ ಕ್ಷಣದವರೆಗೂ ದರ್ಶನ್ ನೋಡಲು ಪರಿತಪಿಸುತ್ತಿದ್ದರು.