ವಿಜಯ್ ಪ್ರಕಾಶ್ ಹಾಗೂ ಪತ್ನಿ ಮಾಲತಿ 18ನೇ ವರ್ಷದ ದಾಂಪತ್ಯ ಜೀವನವನ್ನು ಮಾಲ್ಡಿವ್ಸ್ ನಲ್ಲಿ ಆಚರಿಸಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ‘ಖಾಲಿ ಕ್ವಾಟರ್ ಬಾಟ್ಲಿ ಹಂಗೆ ಲೈಫೂ ’ ಅಂತಹ ಕಿಕ್ ಹಾಡಿನ ಮೂಲಕ ಎಲ್ಲರ ಗಮನ ಸೆಳೆದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಪತ್ನಿಯೊಂದಿಗೆ ಮಾಲ್ಡಿವ್ಸ್ ನಲ್ಲಿ ಮಧುರ ಕ್ಷಣಗಳನ್ನು ಕಳೆದಿದ್ದಾರೆ.

View post on Instagram

ಕಾರ್ಯಕ್ರಮ ಹಾಗು ಸರಿಗಮಪ ಸಂಗೀತ ರಿಯಾಲಿಟಿ ಶೋನಲ್ಲಿ ತೀರ್ಪುಗಾರಗಾಗಿ ಕೆಲಸದಲ್ಲಿ ಬ್ಯುಸಿ ಇರುವ ವಿಜಯ್ ಸಮಯ ಮಾಡಿಕೊಂಡು ಪಯಣ ಮಾಡಿದ್ದಾರೆ. ಈ ಮುದ್ದು ಜೋಡಿಗೆ ಕಾವ್ಯ ಎಂಬ ಮುದ್ದಾದ ಮಗಳಿದ್ದಾಳೆ.

ಮಾಲತಿ ಹಾಗು ವಿಜಯ್ ಪ್ರಕಾಶ್ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೇ ಆದವರು. ಮಾಲತಿ ಕೂಡ ಗಾಯಕಿಯಾಗಿದ್ದು ವಾಯ್ಸ್ ಓರ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡುತ್ತಾರೆ. ವಿವಾಹ ವಾರ್ಷಿಕೋತ್ಸವ ಸಂಭ್ರಮಕ್ಕೆ ಮಾಲ್ಡಿವ್ಸ್ ಸೂಕ್ತ ಜಾಗ ಎಂದು ತನ್ನ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.