ಝೀ ಕನ್ನಡ ಗಾನ ಕೋಗಿಲೆ ಸುಹಾನಾ ಸೈಯದ್ ಈಗ ಎಂಬಿಎ ಪಧವೀಧರೆ. ಸಂಗೀತ ಅಭ್ಯಾಸದ ಜೊತೆಗೆ ಎಂಬಿಎಯನ್ನು ಮುಗಿಸಿದ್ದಾರೆ. 

ಬೆಂಗಳೂರು (ಆ. 14): ಝೀಟೀವಿಯ ಸರೆಗಮಪದಲ್ಲಿ ಹಾಡಿ ಗಮನಸೆಳೆದ ಸುಹಾನಾ ಸೈಯದ್ ಸದ್ದಿಲ್ಲದೇ ಎಂಬಿಎ ಮುಗಿಸಿದ್ದಾರೆ. ಇದೀಗ ಅವರು ಎಂಬಿಎ ಪದವೀಧರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರೆಗಮಪ ಮಾಡುತ್ತಿದ್ದಾಗಲೇ ಪರೀಕ್ಷೆ ಬರೆದಿದ್ದೆ. ನಂತರ ಆ ಕಾರ್ಯಕ್ರಮದ ನಡುವೆಯೇ ಇಂಟರ್ನಲ್ ಮುಗಿಸಿದೆ, ಒದ್ದಾಡುತ್ತಲೇ ಪ್ರಾಜೆಕ್ಟ್ ಕಂಪ್ಲೀಟ್ ಮಾಡಿದೆ. ಒಂದು ಕಡೆ ಸಂಗೀತ ಮತ್ತೊಂದು ಕಡೆ ಅಭ್ಯಾಸ. ಎರಡನ್ನೂ ಸರಿಸಮನಾಗಿ ತೆಗೆದುಕೊಂಡು ಬ್ಯಾಲೆನ್ಸ್ ಮಾಡೋದು ಕಷ್ಟದ ಕೆಲಸವೇ ಆಗಿತ್ತು.

ಇದರ ಮಧ್ಯೆ ಕೆಲವೊಂದಷ್ಟು ಮಂದಿಯ ಟೀಕೆ, ಗೇಲಿ ಬೇರೆ. ಇವರೆಲ್ಲ ಓದೋರೇನ್ರೀ, ಬರೀ ಶೋಕಿ ಮಾಡ್ತಾರೆ ಎಂಬಿತ್ಯಾದಿ ನೋಯಿಸುವ ಮಾತುಗಳ ನಡುವೆಯೇ ಕಷ್ಟಪಟ್ಟು ಓದಿದೆ. ಸವಾಲುಗಳ ಮಧ್ಯೆ ಗೆದ್ದೆ. ನಾನೇನು ಆಗಬೇಕು
ಅಂದುಕೊಂಡಿದ್ದೆನೋ ಅದೀಗ ಆಗಿದ್ದೇನೆ. ನನ್ನ ಬೆನ್ನಿಗೆ ನಿಂತು ಕಾಪಾಡಿದ ಹೆತ್ತವರಿಗೆ, ಮಿತ್ರರಿಗೆ, ಹಿತೈಷಿಗಳಿಗೆ ಥ್ಯಾಂಕ್ಸ್! ಹಾಗಂತ ಸುಹಾನಾ ಸೈಯದ್ ಹೇಳಿಕೊಂಡಿದ್ದಾರೆ. ಸುಹಾನಾಗೊಂದು ಅಭಿನಂದನೆ.