ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳಿಗೆ ಅಶ್ಲೀಲವಾಗಿ ಮೆಸೇಜ್ ಮಾಡುವ, ಮಾನಸಿಕವಾಗಿ ಕಿರಿಕಿರಿ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಗಾಯಕಿಯೊಬ್ಬರಿಗೆ ವ್ಯಕ್ತಿಯೊಬ್ಬ ಅಶ್ಲೀಲವಾಗಿ ಮೆಸೇಜ್ ಮಾಡಿರುವುದು ಬಹಿರಂಗವಾಗಿದೆ.

ಗಾಯಕಿ ಸುಚಿತ್ರಾ ಕೃಷ್ಣಮೂರ್ತಿಯವರಿಗೆ ವ್ಯಕ್ತಿಯೊಬ್ಬ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೆ. ರಾಷ್ಟ್ರೀಯ ಅಪರಾಧ ನಿಯಂತ್ರಣ ಮಂಡಳಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪ್ರೊಫೈಲ್ ನಲ್ಲಿ ಬರೆದುಕೊಂಡಿರುವ ವ್ಯಕ್ತಿಯೊಬ್ಬ, ಕೃಷ್ಣಮೂರ್ತಿ ಸೆಕ್ಸ್ ಮಾಡಲು ಬರುತ್ತೀಯಾ ಎಂದು ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೆ. 

 

ಇವನ ಮೆಸೇಜ್ ಸ್ಕ್ರೀನ್ ಶಾಟ್ ತೆಗೆದು ಸುಚಿತ್ರಾ ಕೃಷ್ಣಮೂರ್ತಿ ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ, ವ್ಯಕ್ತಿಯೊಬ್ಬ ಅಸಭ್ಯವಾಗಿ ಮೆಸೇಜ್ ಮಾಡಿ  ಕಿರುಕುಳ ನೀಡುತ್ತಿದ್ದಾನೆ. ದಯವಿಟ್ಟು ಇದ ನ್ನು ಪರಿಗಣಿಸಿ ಎಂದು ಬರೆದುಕೊಂಡಿದ್ದಾರೆ. 

ಮೇಡಂ ನಾವು ನಿಮ್ಮನ್ನು ಫಾಲೋ ಮಾಡುತ್ತಿದ್ದೇವೆ. ಇದನ್ನು ನಾವು ಸೈಬರ್ ಪೊಲೀಸರಿಗೆ ತಿಳಿಸಿದ್ದೇವೆ. ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಪೋರ್ಟ್ ಮಾಡಿದ್ದಾರೆ. 

ಸುಚಿತ್ರಾ ಕೃಷ್ಣಮೂರ್ತಿ ಡೋಲೆ ಡೋಲೆ, ಡಮ್ ತಾರಾ, ಆಹಾ, ಜಿಂದಗಿ ಆಲ್ಬಮ್ ಗಳಲ್ಲಿ ಹಾಡಿದ್ದಾರೆ.