ದುನಿಯಾ ವಿಜಯ್‌ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸುತ್ತಿರುವ ‘ಸಲಗ’ಚಿತ್ರವೀಗ ಮುಕ್ಕಾಲು ಭಾಗದ ಚಿತ್ರೀಕರಣ ಮುಗಿಸಿದೆ. ಕ್ಲೈಮ್ಯಾಕ್ಸ್‌ ಹಾಗೂ ಫ್ಲಾಷ್‌ಬ್ಯಾಕ್‌ ಹಂತದ ಚಿತ್ರೀಕರಣ ಮಾತ್ರ ಬಾಕಿಯಿದೆ. ಈ ಹಂತದಲ್ಲೀಗ ಚಿತ್ರಕ್ಕೆ ನಿರ್ದೇಶಕ ಬಹದ್ದೂರ್‌ ಚೇತನ್‌ ಹಾಗೂ ಗಾಯಕ ನವೀನ್‌ ಸಜ್ಜು ಸಾಥ್‌ ನೀಡಿದ್ದಾರೆ. 

ಚಿತ್ರದಲ್ಲಿ ನಾಯಕ, ನಾಯಕಿಯನ್ನು ರೇಗಿಸುವ ಸನ್ನಿವೇಶಕ್ಕೆ ಚೇತನ್‌ ಹಾಗೂ ನವೀನ್‌ ಸಜ್ಜು ಇಬ್ಬರು ಸೇರಿ ಸ್ಪೆಷಲ್‌ ಸಾಂಗ್‌ವೊಂದನ್ನು ಬರೆದಿದ್ದಾರೆ. ಸದ್ಯಕ್ಕೆ ಅದರ ಚಿತ್ರೀಕರಣ ಕೂಡ ಆಗಿಲ್ಲ. ಹಾಗೆಯೇ ಅದನ್ನು ಸೂಕ್ತ ಗಾಯಕರಿಂದಲೇ ಹಾಡಿಸಬೇಕೆನ್ನುವ ಆಲೋಚನೆ ನಿರ್ಮಾಪಕ ಶ್ರೀಕಾಂತ್‌ ಅವರದ್ದು.

Add Asianetnews Kannada as a Preferred SourcegooglePreferred

ಮತ್ತೆ ಲಾಂಗ್ ಹಿಡಿದ ದುನಿಯಾ ವಿಜಯ್!

‘ಇದೊಂದು ಸ್ಪೆಷಲ್‌ ಸಾಂಗ್‌.ಒಳ್ಳೆಯ ಸಾಹಿತ್ಯ ಇದ್ದರೆ ಚೆಂದ ಅಂತ ಚೇತನ್‌ ಹಾಗೂ ನವೀನ್‌ ಸಜ್ಜು ಅವರನ್ನು ಕೇಳಿಕೊಂಡಿದ್ದೆ. ಅವರೇ ಆಸಕ್ತಿ ವಹಿಸಿ ಗೀತೆ ರಚನೆ ಮಾಡಿಕೊಟ್ಟಿದ್ದಾರೆ. ಚರಣ್‌ ರಾಜ್‌ ಅದಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯಕ್ಕೆ ಗಾಯಕರು ಫಿಕ್ಸ್‌ ಆಗಿಲ್ಲ. ಜನಪ್ರಿಯ ಗಾಯಕರಿಂದಲೇ ಅದನ್ನು ಹಾಡಿಸಬೇಕೆನ್ನುವ ಆಲೋಚನೆಯಲ್ಲಿದ್ದೇನೆ. ಇನ್ನೇನು ಮೂರ್ನಾಲ್ಕು ದಿನದಲ್ಲಿ ಅದು ಫೈನಲ್‌ ಆಗಲಿದೆ’ ಎನ್ನುತ್ತಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್‌. ಇನ್ನು ಚಿತ್ರದ ಬಾಕಿ ಚಿತ್ರೀಕರಣ ಇನ್ನೇನು ವಾರದಲ್ಲೇ ಶುರುವಾಗುತ್ತಿದಯಂತೆ. ಅದರಲ್ಲೂ ಕ್ಲೈಮ್ಯಾಕ್ಸ್‌ ಚಿತ್ರೀಕರಣವನ್ನು ಅದ್ಧೂರಿ ವೆಚ್ಚದಲ್ಲಿ ತೆರೆಗೆ ತರುವ ಆಲೋಚನೆಯಲ್ಲಿದ್ದಾರೆ ಶ್ರೀಕಾಂತ್‌.

ಡಾಲಿ ಧನಂಜಯ್ ಇದೀಗ ಪೊಲೀಸ್ ; ಖಡಕ್ ಲುಕ್‌ ಆಯ್ತು ವೈರಲ್

‘ ಒಂದು ಚಿತ್ರದ ಪ್ರಮುಖ ಆಕರ್ಷಮೆ ಕ್ಲೈಮ್ಯಾಕ್ಸ್‌. ಈ ಚಿತ್ರದ ಮಟ್ಟಿಗೆ ಸ್ಪೆಷಲ್‌. ಅದನ್ನು ಅದ್ಧೂರಿ ವೆಚ್ಚದಲ್ಲೇ ತೆರೆಗೆ ತರಲು ನಿರ್ಧರಿಸಿದ್ದೇವೆ. ಕನ್ನಡಕ್ಕೆ ಹೊಸತೆನಿಸುವಂತಹ ಸಾಹಸ ಸನ್ನಿವೇಶಗಳು, ಸೆಂಟಿಮೆಂಟ್‌ ಅಂಶಗಳು ಅದರಲ್ಲಿವೆ. ಸದ್ಯಕ್ಕೆ ಅದನ್ನು ಎಲ್ಲಿ, ಹೇಗೆ ಚಿತ್ರೀಕರಿಸಬೇಕೆನ್ನುವುದು ಕೂಡ ನಿರ್ಧಾರ ಆಗಿಲ್ಲ. ನಿರ್ದೇಶಕರು ಆದ ನಾಯಕ ನಟ ವಿಜಯ್‌ ಅವರ ಜತೆಗೆ ಮಾತುಕತೆ ನಡೆದಿದೆ’ಎಂದು ವಿವರ ನೀಡುತ್ತಾರೆ.

’ಸಲಗ’ ಸೆಟ್‌ಗೆ ಶಿವಣ್ಣ ಸಪ್ರೈಸ್ ಭೇಟಿ; ಇದು ಸುವರ್ಣ ವಿಶೇಷ