ಭಾವಗೀತೆಗಳಿಗೆ ಭಾವ ತುಂಬುವ ಗಾಯಕಿ, ಎಂತದೇ ಹಾಡುಗಳಿಗೂ ಸೈ ಎನಿಸುವಂತಹ ಗಾಯಕಿ ಪಲ್ಲವಿ ಅರುಣ್. 

ಇದೀಗ ರಾಷ್ಟ್ರ ಪ್ರಶಸ್ತಿಯೊಂದು ಪಲ್ಲವಿ ಅರುಣ್ ಕೈ ಸೇರಿದೆ. ಉಸ್ತದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ 2018 ಪ್ರಶಸ್ತಿ ಘೋಷಣೆಯಾಗಿದ್ದು 32 ಪ್ರತಿಭೆಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪಟ್ಟಿಗೆ ನಮ್ಮ ಹೆಮ್ಮೆಯ ಎಂ ಡಿ ಪಲ್ಲವಿ ಕೂಡಾ ಸೇರಿದ್ದಾರೆ. 

 

ಸಂಗೀತ ನಾಟಕ ಅಕಾಡೆಮಿಯಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. 40 ವರ್ಷದ ಕೆಳಗಿನ ಸಾಧಕರಿಗೆ ಈ ಪ್ರಶಸ್ತಿ ಕೊಟ್ಟು ಗೌರವಿಸಲಾಗುತ್ತದೆ. ಪ್ರಶಸ್ತಿ ಜೊತೆಗೆ 25 ಸಾವಿರ ಪ್ರೋತ್ಸಾಹ ಧನವನ್ನೂ ನೀಡಲಾಗುತ್ತದೆ.

ಎಂ ಡಿ ಪಲ್ಲವಿ ಅವರು ಕರ್ನಾಟಕದ ಪ್ರಸಿದ್ಧ ಸುಗಮ ಸಂಗಿತ ಗಾಯಕಿ. ದುನಿಯಾ ಚಿತ್ರದ ‘ನೋಡಯ್ಯಾ ಕ್ವಾಟೆ ಲಿಂಗವೇ’ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಕಿರುತೆರೆಯ ಮಾಯಾಮೃಗ, ಗರ್ವ ಎಂಬ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.