ಇಂಡಿಯನ್ ರ್ಯಾಪ್ ಸ್ಟಾರ್ ಬಾದ್ ಶಾ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 

‘ನನ್ನ ಮಗಳು ವಯಸ್ಸಿಗೆ ಬಂದಾಗ ಸೆಕ್ಸ್ ಬಗ್ಗೆ ಮಾತನಾಡುವುದನ್ನು ಕಾಯುತ್ತಿದ್ದೇನೆ‘ ಎಂದು ಬಾದ್ ಶಾ ಹೇಳಿದ್ದಾರೆ. ಅರೇ, ಇದೇನಿದು ಬಾದ್ ಶಾ ಯಾಕೆ ಹೀಗೆಲ್ಲಾ ಮಾತಾಡ್ತಾರೆ ಅಂದ್ಕೋಬೇಡಿ. ಇದಕ್ಕೆ ಅವರು ಸ್ಪಷ್ಟೀಕರಣವನ್ನೂ ನೀಡಿದ್ದಾರೆ. 

’ನೀವು ನಿಮ್ಮ ತಂದೆ- ತಾಯಿ ಬಳಿ ಸೆಕ್ಸ್ ಬಗ್ಗೆ ಮಾತನಾಡುತ್ತೀರಾ? ನಾನಂತೂ ಮಾತನಾಡುವುದಿಲ್ಲ. ಮಡಿವಂತಿಕೆಯನ್ನು ಬಿಟ್ಟು ಎಲ್ಲರೂ ಮಾತನಾಡಬೇಕು. ನನ್ನ ಮಗಳು ಒಂದು ವಯಸ್ಸಿಗೆ ಬಂದಾಗ ಸೆಕ್ಸ್ ಎಜುಕೇಶನ್ ಬಗ್ಗೆ ಮಾತನಾಡುವುದಕ್ಕೆ ಕಾಯುತ್ತಿದ್ದೇನೆ. ಅವಳಿಗೆ ಅದರ ಬಗ್ಗೆ ತಿಳುವಳಿಕೆ ಇರಬೇಕು. ಅಪ್ಪನಿಗೆ ಏನಾಗಿದೆ ಎಂದು ಅವಳಿಗೆ ವಿಚಿತ್ರ ಎನಿಸಬಹುದು. ಇದನ್ನು ಹೇಗೆ ಫನ್ ಮಾಡಬೇಕೆಂದು ನನಗೆ ಗೊತ್ತಿದೆ’ ಎಂದಿದ್ದಾರೆ. 

ಬಾದ್ ಶಾ, ಸೋನಾಕ್ಷಿ ಸಿನ್ಹಾ ಜೊತೆ ‘ಖಾಂದಾನಿ ಶಫಾಖಾನಾ’ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಆಗಸ್ಟ್ 2 ರಂದು ಈ ಚಿತ್ರ ತೆರೆಗೆ ಬರಲಿದೆ. 

ಸೆಕ್ಸ್ ಕ್ಲಿನಿಕ್ ವೊಂದರಲ್ಲಿ ಸೋನಾಕ್ಷಿ ಸಿನ್ಹಾ ಕೆಲಸ ಮಾಡುತ್ತಿರುತ್ತಾರೆ. ಭಾರತೀಯ ಸಮಾಜ ಸೆಕ್ಸ್ ಬಗ್ಗೆ ಇನ್ನೂ ಹೇಗೆ ಮೂಢನಂಬಿಕೆ ಇಟ್ಟುಕೊಂಡಿದೆ? ಮಡಿವಂತಿಕೆ ಇಟ್ಟುಕೊಂಡಿದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.