ಸಂಗೀತದಷ್ಟೆಅದ್ಭುತವಾಗಿ ಹಾಡುವ ಪ್ರತಿಭೆಯೂ ಆಗಿರುವ ಅನೂಪ್‌ ಸಂಗೀತ ಸಂಯೋಜನೆಯ ‘ಪೊಲೀಸ್‌ ಬೇಬಿ’ ಹಾಡು ಈಗಾಗಲೇ ಒಂದು ಮಿಲಿಯನ್‌ ಗಡಿ ದಾಟಿದೆ. ‘ಭಲೆ ಭಲೆ’ ಹಾಡುಗಳ ಯಶಸ್ಸಿನ ಗುಂಗಿನಲ್ಲೇ ಮತ್ತೊಂದು ಹಾಡನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಹಾಡು ಕೂಡ ದೊಡ್ಡ ಮಟ್ಟದಲ್ಲಿ ಹಿಟ್‌ ಆಗುತ್ತದೆಂಬ ನಂಬಿಕೆ ಅನೂಪ್‌ ಸೀಳಿನ್‌ ಅವರದ್ದು.

ನಾನು ಕಮರ್ಷಿಯಲ್‌ ಸಿನಿಮಾಗಳಿಗೆ ಹೆಚ್ಚು ಸಂಗೀತ ನೀಡಿಲ್ಲ ಎನ್ನುವ ಅಪವಾದವನ್ನು ಈ ಚಿತ್ರ ದೂರ ಮಾಡಲಿದೆ. ಆ ಮಟ್ಟಿಗೆ ಹಾಡುಗಳು ಬಂದಿವೆ. ನನಗೆ ಇದು ಕಮ್‌ ಬ್ಯಾಕ್‌ ಸಿನಿಮಾ ಆಗುವ ಭರವಸೆ ಇದೆ. ಈಗಾಗಲೇ ಪೊಲೀಸ್‌ ಬೇಬಿ ಹಾಡು ಸೂಪರ್‌ ಹಿಟ್‌ ಆಗಿದೆ. ಅದೇ ರೀತಿ ಈ ಹಾಡು ಕೂಡ ಯಶಸ್ಸು ಕಾಣುತ್ತದೆಂಬ ನಂಬಿಕೆ ಇದೆ.- ಅನೂಪ್‌ ಸೀಳಿನ್‌

ಕೈಲಾಶ್‌ ಖೇರ್‌ ಹಾಡಿರುವ, ಬಿಆರ್‌ ಲಕ್ಷ್ಮಣರಾವ್‌ ರಚನೆಯ ‘ದೇವರೇ ಅಗಾಧ ನಿನ್ನ ಕರುಣೆಯ ಕಡಲು’ ಎನ್ನುವ ಹಾಡು ಈಗಷ್ಟೆಅನಾವರಣಗೊಂಡಿದೆ. ಭಕ್ತಿ ಮತ್ತು ಭಾವುಕತೆಯ ದಾಟಿಯಲ್ಲಿ ಸಾಗುವ ಈ ಹಾಡು ಚಿತ್ರದ ಕತೆಗೆ ಮಹತ್ವದ ತಿರುವು ಕೊಡುತ್ತದೆಂಬುದು ಅನೂಪ್‌ ಮಾತು. ರವಿವರ್ಮ ನಿರ್ದೇಶನದ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಮೊದಲ ಬಾರಿಗೆ ಶಿವರಾಜ್‌ಕುಮಾರ್‌ ಹಾಗೂ ವಿವೇಕ್‌ ಒಬೆರಾಯ್‌ ಜತೆಯಾಗಿ ನಟಿಸಿದ್ದಾರೆ. ಶ್ರದ್ಧ ಶ್ರೀನಾಥ್‌ ನಾಯಕಿಯಾಗಿ ನಟಿಸಿದ್ದು, ಜಯಣ್ಣ ಈ ಚಿತ್ರವನ್ನು ನಿರ್ಮಿಸಿದ್ದಾರೆ.