ವಿದೇಶದಿಂದ ಶೂಟಿಂಗ್ ಬಿಟ್ಟು ಬಚ್ಚನ್ ಭಾರತಕ್ಕೆ ಬಂದಿದ್ದೇಕೆ..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Aug 2018, 12:57 PM IST
Shweta Nanda Father In Law Rajan Nanda Passed Away
Highlights

ವಿದೇಶದಲ್ಲಿ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ತಕ್ಷಣವೇ ಭಾರತಕ್ಕೆ ಆಗಮಿಸಿದ್ದಾರೆ. ಪುತ್ರಿ ಶ್ವೇತಾ ನಂದಾ ಅವರ ಮಾವ ನಿಧನದ ಹಿನ್ನೆಲೆಯಲ್ಲಿ ತುರ್ತಾಗಿ ಆಗಮಿಸಿದ್ದಾರೆ. 

ಮುಂಬೈ :  ಅಮಿತಾಭ್ ಬಚ್ಚನ್ ಪುತ್ರಿ ಶ್ವೇತ ಬಚ್ಚನ್ ಅವರ ಮಾವ ರಾಜನ್ ನಂದಾ ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ.  ಎಸ್ಕಾರ್ಟ್  ಗ್ರೂಪ್ ಮುಖ್ಯಸ್ಥರಾದ ನಂದಾ ಅವರ ನಿಧನಕ್ಕೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. 

ಇನ್ನು ಸಂಬಂಧಿ ಹಾಗೂ ಅತ್ಯಾಪ್ತರಾದ ನಂದಾ ಅವರನ್ನು ಕಳೆದುಕೊಂಡಿರುವುದು  ತಮಗೆ ಅತ್ಯಂತ ನೋವಾಗಿದೆ ಎಂದು ಬಾಲಿವುಡ್ ಬಿಗ್ ಬಿ ಅಮಿತಾಭ್  ಬಚ್ಚನ್ ಅವರು ಬ್ಲಾಗಲ್ಲಿ ಬರೆದುಕೊಂಡಿದ್ದಾರೆ. 

ಇನ್ನು ಬಲ್ಗೇರಿಯಾದಲ್ಲಿ ಚಿತ್ರದ ಶೂಟಿಂಗ್ ನಲ್ಲಿ  ಇದ್ದ ಬಚ್ಚನ್ ಅವರು ನಂದಾ ಅವರ ನಿಧನ ಹಿನ್ನೆಲೆಯಲ್ಲಿ ತುರ್ತಾಗಿ ಭಾರತಕ್ಕೆ ಆಗಮಿಸಿದ್ದಾರೆ. 

ಅಲ್ಲದೇ ಅನೇಕರು ನಂದಾ ಅವರ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದು ಈ ನಿಟ್ಟಿನಲ್ಲಿ ಎಲ್ಲರಿಗೂ ಧನ್ಯವಾದ ಎಂದು ಬಚ್ಚನ್ ಹೇಳಿದ್ದಾರೆ. 

ಬಿಗ್ ಬಿ ಪುತ್ರ ಶ್ವೇತಾ ಬಚ್ಚನ್ ಅವರನ್ನು ರಾಜನ್ ನಂದಾ ಅವರ ಪುತ್ರ ನಿಖಿಲ್ ನಂದಾ ಅವರಿಗೆ ವಿವಾಹ ಮಾಡಿ ಕೊಡಲಾಗಿದೆ. 

loader