ಬೆಂಗಳೂರು (ಸೆ. 21): ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ಸದ್ಯ  'ರಂಗ ಮಂದಿರ' ಎನ್ನುವ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 

ತಮ್ಮ ಫೇಸ್ ಬುಕ್ ಪೇಜಲ್ಲಿ ಇದನ್ನು ಹಂಚಿಕೊಂಡಿದ್ದಾರೆ.

 

ಪ್ರತಿ ಮೂವಿಯ ಶೂಟಿಂಗ್ ನ ಮೊದಲ ದಿನ ಯಾವಾಗಲೂ ವಿಶೇಷವಾಗಿರುತ್ತದೆ ಎಂದು ಬರೆದುಕೊಂಡಿದ್ದಾರೆ. 

ಶೃತಿ ಪ್ರಕಾಶ್  ’ಲಂಡನ್ ನಲ್ಲಿ ಲಂಬೋದರ’ ಎನ್ನುವ ಹಾಸ್ಯ ಪ್ರಧಾನವಾದ ಚಿತ್ರದಲ್ಲೂ ಅಭಿನಯಿಸಿದ್ದಾರೆ. ನಂತರ ’ಫಿದಾ’ ಎನ್ನುವ ಚಿತ್ರದಲ್ಲೂ ನಟಿಸಲು ಒಪ್ಪಿಕೊಂಡಿದ್ದಾರೆ. ಇದುವರೆಗೂ ಹಿಂದಿ ಸೀರಿಯಲ್, ಹಾಡುಗಳ ಮೂಲಕ ಛಾಪು ಮೂಡಿಸಿದ್ದ ಶೃತಿ ಪ್ರಕಾಶ್ ಸ್ಯಾಂಡಲ್ವುಡ್ ನಲ್ಲಿ ಹವಾ ಸೃಷ್ಟಿಸಲಿದ್ದಾರೆ.