ಇದೇ ಮೊದಲ ಸಾರಿ ಎಂಬಂತೆ ಶ್ರುತಿ ತಮ್ಮ ಬಾಯ್ ಫ್ರೆಂಡ್ ಜತೆ ಕಾಣಿಸಿಕೊಂಡಿದ್ದಾರೆ.  ಸುದ್ದಿ ಮಾಡಿರುವ ಶ್ರುತಿ ಹರಿಹರನ್ ಬಗ್ಗೆ ನಾವು ಹೇಳ್ತಾ ಇಲ್ಲ. ಇದು ಶ್ರುತಿ ಹಾಸನ್ ಗೆ ಸಂಬಂಧಿಸಿದ ಸುದ್ದಿ.

ಬಾಲಿವುಡ್ ನಲ್ಲಿ ಮಿಂಚಿರುವ ಕಮಲ್ ಹಾಸನ್ ಮಗಳು ಮೊದಲ ಸಾರಿ ತಮ್ಮ ಗೆಳೆಯನ ಪರಿಚಯ ಮಾಡಿಕೊಟ್ಟಿದ್ದಾರೆ. ಇಸ್ಟಾಗ್ರಾಮ್ ಮೂಲಕ ತಮ್ಮ ಗೆಳಯನ ಮೈಕಲ್ ಕೋರ್ಸೆಲ್ ಅವರೊಂದಿಗೆ ಇರುವ ಫೋಟೋ ಶೇರ್ ಮಾಡಿದ್ದಾರೆ.

ಶ್ರುತಿ ಹಾಸನ್ ಮತ್ತು ಮೈಕಲ್ ಕೋರ್ಸೆಲ್ ಡೇಟ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಬಹಳ ದಿನಗಳಿಂದ ಕೇಳಿ ಬರುತ್ತಿತ್ತು. ಅದಕ್ಕೆ ಈ ಫೋಟೋ ಪುರಾವೆ ನೀಡಿದೆ. ಕನ್ನಡಕ್ಕೂ ಶ್ರುತಿ ಹಾಸನ್ ಬರುತ್ತಾರೆ ಎಂಬ ಸುದ್ದಿಯೂ ಹರಿದಾಡಿತ್ತು. 

View post on Instagram