Asianet Suvarna News Asianet Suvarna News

ಬಿಗ್’ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ಸ್ಯಾಂಡಲ್’ವುಡ್’ಗೆ ಎಂಟ್ರಿ

ಕನ್ನಡದವರಾದರೂ ಮುಂಬೈನಲ್ಲಿ ಬೆಳೆದ ಗಾಯಕಿ ಶ್ರುತಿ ಪ್ರಕಾಶ್ ನಾಯಕಿಯಾಗಿ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ರಾಜ್ ಸೂರ್ಯ ನಿರ್ದೇಶನದ ‘ಲಂಡನ್‌ನಲ್ಲಿ  ಲಂಬೋದರ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.  ಅದೇ ವೇಳೆ ಶ್ರುತಿ ಹಿನ್ನೆಲೆ ಗಾಯಕಿ ಆಗಿಯೂ ಕನ್ನಡ  ಚಿತ್ರೋದ್ಯಮದಲ್ಲಿ ತಮ್ಮ ಕೆರಿಯರ್ ಶುರು ಮಾಡಿದ್ದಾರೆ.  ನಟನೆ, ಗಾಯನ ಒಟ್ಟಿಗೆ ಎರಡು ದೋಣಿಯ ಜರ್ನಿ ಅವರದು. ಈ ಜರ್ನಿಯ ಕುರಿತ ಮಾತುಗಳು ಇಲ್ಲಿವೆ.

Shruthi Prakash Sandalwood Entry

ಬೆಂಗಳೂರು (ಫೆ. 28):  ಕನ್ನಡದವರಾದರೂ ಮುಂಬೈನಲ್ಲಿ ಬೆಳೆದ ಗಾಯಕಿ ಶ್ರುತಿ ಪ್ರಕಾಶ್ ನಾಯಕಿಯಾಗಿ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ರಾಜ್ ಸೂರ್ಯ ನಿರ್ದೇಶನದ ‘ಲಂಡನ್‌ನಲ್ಲಿ  ಲಂಬೋದರ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.  ಅದೇ ವೇಳೆ ಶ್ರುತಿ ಹಿನ್ನೆಲೆ ಗಾಯಕಿ ಆಗಿಯೂ ಕನ್ನಡ  ಚಿತ್ರೋದ್ಯಮದಲ್ಲಿ ತಮ್ಮ ಕೆರಿಯರ್ ಶುರು ಮಾಡಿದ್ದಾರೆ.  ನಟನೆ, ಗಾಯನ ಒಟ್ಟಿಗೆ ಎರಡು ದೋಣಿಯ ಜರ್ನಿ ಅವರದು. ಈ ಜರ್ನಿಯ ಕುರಿತ ಮಾತುಗಳು ಇಲ್ಲಿವೆ.

‘ಲಂಡನ್‌ನಲ್ಲಿ ಲಂಬೋದರ’ ಚಿತ್ರಕ್ಕೆ ನಾಯಕಿಯಾಗಿ  ಆಯ್ಕೆಯಾಗಿದ್ದೀರಿ...
ಹೌದು. ಒಂದೊಳ್ಳೆ ಕತೆ, ಪಾತ್ರವೂ ಚೆನ್ನಾಗಿದೆ. ನಿರ್ದೇಶಕ  ರಾಜ್ ಸೂರ್ಯ ಬಂದು ಕತೆ ಹೇಳಿ ತಾವೇ ಈ ಚಿತ್ರದ  ನಾಯಕಿ ಆಗಬೇಕು ಅಂದ್ರು. ಪಾತ್ರದ ಮಾಹಿತಿ  ಪಡೆದುಕೊಂಡೆ, ಅನಂತರ ಓಕೆ ಹೇಳಿದೆ.

ನೀವಿಲ್ಲಿ ಯಾವ ಥರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೀರಿ?
ಪಾತ್ರದ ಬಗ್ಗೆ ನಾನು ಹೆಚ್ಚು ಮಾತನಾಡುವುದಕ್ಕೆ ಇಷ್ಟಪಡೋದಿಲ್ಲ. ಇನ್ನು ಸಿನಿಮಾ ಶುರುವಾಗಿಲ್ಲ, ಆಗಲೇ ಚಿತ್ರದಲ್ಲಿನ ನನ್ನ ಪಾತ್ರ ಎಂಥದ್ದು ಅಂತ ಹೇಳಿಕೊಳ್ಳುವುದು  ನನಗೂ ಇಷ್ಟ ಆಗೋದಿಲ್ಲ. ಹಾಗಂತ ಇದು ನಿರ್ದೇಶಕರ ಸೂಚನೆ ಅಂತಲ್ಲ. ಸದ್ಯಕ್ಕೆ ಅದೇನು ಅಂತ ರಿವೀಲ್ ಮಾಡೋದಿಲ್ಲ.

ಕನ್ನಡದಲ್ಲಿ ನೀವೀಗ ಕಾಲ್‌ಶೀಟ್ ನೀಡಿದ ಸಿನಿಮಾಗಳೆಷ್ಟು?
ಅಧಿಕೃತವಾಗಿ ಒಂದು. ಅದು ನಟಿಯಾಗಿ. ಇನ್ನು ನಿರ್ದೇಶಕ  ದಯಾಳ್ ಸರ್ ನಿರ್ದೇಶನದ ಕರಾಳ ರಾತ್ರಿಯಲ್ಲಿ ಒಂದು  ಸಾಂಗ್ ಹಾಡುತ್ತಿದ್ದೇನೆ. ಒಂದೆರೆಡು ಪ್ರಾಜೆಕ್ಟ್ ಮಾತುಕತೆ ಹಂತದಲ್ಲಿವೆ.

ನಟನೆಯಲ್ಲಿ ನಿಮಗಿದ್ದ ಅನುಭವ ಏನು?
ನಮ್ಮ ಕುಟುಂಬದಲ್ಲಿ ಫಸ್ಟ್ ಟೈಮ್ ಬೆಳ್ಳಿತೆರೆಗೆ  ಕಾಲಿಡುತ್ತಿರುವವಳು. ಗಾಯಕಿ ಆಗಿ ಮುಂಬೈನಲ್ಲಿ ನನ್ನ  ಪರಿಚಯವಿದೆ. ಹಿಂದಿಯ ಸ್ಟಾರ್ ಫ್ಲಸ್ ಮನರಂಜನೆ ವಾಹಿನಿಯಲ್ಲಿ ಪ್ರಸಾರವಾದ ‘ಸಾಥ್ ನಿಭಾನಾ ಸಾಥಿಯ’ ಸೀರಿಯಲ್‌ನಲ್ಲಿ ಅಭಿನಯಿಸಿದ್ದೆ. ಅಲ್ಲಿಂದಲೇ ನನಗೆ  ಆ್ಯಕ್ಟರ್ ಆಗುವ ಆಸೆಯಿತ್ತು. ಆ ಆಸೆ ಬಿಗ್‌ಬಾಸ್  ರಿಯಾಲಿಟಿ ಶೋ ಮೂಲಕ ಮತ್ತಷ್ಟು ಇಂಬು ಕೊಟ್ಟಿದೆ.

ಒಂದೆಡೆ ನಟನೆ ಮತ್ತೊಂದೆಡೆ ಗಾಯಕಿ, ನೀವೀಗ ಎರಡು ದೋಣಿಯ ಜರ್ನಿಯಲ್ಲಿದ್ದೀರಿ...
ಮುಂಬೈನಲ್ಲಿ ನಾನು ಒಂದಷ್ಟು ಪರಿಚಯವಿದ್ದರೆ ಅದಕ್ಕೆ  ಕಾರಣ ಸಿಂಗಿಂಗ್. ದಯಾಳ್ ಸರ್ ಬಿಗ್‌'ಬಾಸ್  ಮನೆಯಲ್ಲಿದ್ದಾಗ ಗಾಯಕಿಯಾಗಿ ನನ್ನ ಪ್ರತಿಭೆ ಏನು ಅಂತ ನೋಡಿದ್ರು. ಹಾಗಾಗಿಯೇ ಅವರ ಕರಾಳ ರಾತ್ರಿ ಚಿತ್ರಕ್ಕೆ ಹಾಡಬೇಕು ಅಂದಾಗ ಖುಷಿ ಆಗಿ ಒಪ್ಪಿಕೊಂಡೆ. ಈಗ ಲಂಡನ್‌ನಲ್ಲಿ ಲಂಬೋದರ ಚಿತ್ರದಲ್ಲಿ ಎರಡು  ಹಾಡಿಗೆ ಧ್ವನಿ ನೀಡಬೇಕು ಅಂತ ನಿರ್ದೇಶಕರು ಹೇಳಿದ್ದಾರೆ.  ನನಗೆ ಹಾಡುವುದರಲ್ಲಿಯೇ ಹೆಚ್ಚು ಖುಷಿ.
 

ಬಿಗ್‌ಬಾಸ್ ಬಗ್ಗೆ ಹೇಳಿ...
ನಾನು ನಮ್ಮೂರಿನಲ್ಲಿ ಗುರುತಿಸಿಕೊಳ್ಳಬೇಕು ಅಂತ  ಯೋಚಿಸುತ್ತಿದ್ದಾಗ ಅದೃಷ್ಟವೇ ಎನ್ನುವ ಹಾಗೆ ಕೈ ಮಾಡಿ  ಕರೆದಿದ್ದು ಬಿಗ್‌ಬಾಸ್ ಸೀಸನ್ ೫. ಕೆಲವರು ಆ ಶೋ ಬಗ್ಗೆ  ಏನೇನೋ ಹೇಳಿಕೆ ನೀಡಿದ್ದನ್ನು ನಾನು ನೋಡಿದ್ದೇನೆ. ನಾನು ಯಾವತ್ತಿಗೂ ಆ ಬಗ್ಗೆ ಪಶ್ಚಾತಾಪ ಪಟ್ಟಿಲ್ಲ. ಅಲ್ಲಿಗೆ ಹೋಗಿದ್ದರಿಂದಲೇ ಇವತ್ತು ನಾನು ಕನ್ನಡ ಇಂಡಸ್ತ್ರಿನಲ್ಲಿ  ನಟಿಯಾಗಿ, ಗಾಯಕಿ ಆಗಿ ಗುರುತಿಸಿಕೊಳ್ಳುವಂತೆ
ಮಾಡಿದೆ.

ಕನ್ನಡವನ್ನು ಸರಗವಾಗಿ ಮಾತನಾಡುವುದಕ್ಕೂ ಬಿಗ್'ಬಾಸ್ ಕಾರಣಆಯಿತು ಅಲ್ವಾ?
ಹೌದು, ಬಿಗ್‌ಬಾಸ್ ಮನೆಗೆ ಎಂಟ್ರಿಯಾದ ದಿನಗಳಲ್ಲಿ ನನ್ನ  ಕನ್ನಡ ಕೇಳಿದವರು, ಭಾಷೆಯನ್ನು ಕಗ್ಗೊಲೆ ಮಾಡುತ್ತಿದ್ದೀರಿ ಅಂತ ರೇಗಿಸಿದ್ದರು. ಬರು ಬರುತ್ತಾ ಭಾಷೆಯ ಕಲಿಯುವ ಹಂಬಲ ನಂಗೆ ಹೆಚ್ಚಾಯಿತು. ಆ ಮೂಲಕ ಕನ್ನಡ
ಕಲಿತುಕೊಂಡೆ ಅಂದ್ರೆ ತಪ್ಪಾಗೋದಿಲ್ಲ 

ಸಂದರ್ಶನ: ದೇಶಾದ್ರಿ ಹೊಸ್ಮನೆ 

Follow Us:
Download App:
  • android
  • ios