ಕನ್ನಡ ಚಿತ್ರದಲ್ಲಿ ಶ್ರೀಶಾಂತ್
ಬೆಂಗಳೂರು(ಆ.16): ಸ್ಟಾರ್ ಕ್ರಿಕೆಟಿಗ ಶ್ರೀಶಾಂತ್ ಬಣ್ಣದ ಲೋಕಕ್ಕೆ ಲಗ್ಗೆ ಇಟ್ಟಾಗಿದೆ. ಅದಾಗಲೇ, ಮಾಲಿವುಡ್'ನಲ್ಲಿ ನಟಿಸಿರೋ ಶ್ರೀಶಾಂತ್ ಇದೀಗ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ. ಕನ್ನಡದ 'ಕೆಂಪೇಗೌಡ-2' ಚಿತ್ರದ ಪ್ರಮುಖ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.ಮುಖ್ಯಭೂಮಿಕೆಯಲ್ಲಿ ಕೋಮಲ್ ಅಭಿನಯಿಸುತ್ತಿರುವ 'ಕೆಂಪೇಗೌಡ-2' ಚಿತ್ರದಲ್ಲಿ ಶ್ರೀಶಾಂತ್ ಕೂಡ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಕೆಂಪೇಗೌಡ-2' ಚಿತ್ರದ ನಿರ್ಮಾಣರಾಗಿರೋ ಶಂಕರೆಗೌಡ. ಈ ಚಿತ್ರದ ಮೂಲಕ ನಿರ್ದೇಶಕರಾಗಲಿದ್ದಾರೆ.
