‘ಸಾಹೋ ನಟಿ ಶ್ರದ್ಧಾ ಕಪೂರ್ ಬಾಯ್ ಫ್ರೆಂಡ್ ರೋಹನ್ ಶ್ರೇಷ್ಠ ಜೊತೆ ಮದುವೆಯಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಈ ಮಾತುಗಳಿಗೆ ತಂದೆ ಶಕ್ತಿ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. 

ಮೂಡ್‌ನಲ್ಲಿದ್ದಾಳೆ ಸನ್ನಿ ಲಿಯೋನ್..ಎಚ್ಚರ..ಎಚ್ಚರ!

ನಿಮ್ಮ ಮಗಳು ರೋಹನ್  ಶ್ರೇಷ್ಠ ಜೊತೆ ಮದುವೆಯಾಗುತ್ತಿರುವುದು ನಿಜನಾ ಎಂದು ಮಾಧ್ಯಮದವರು ಕೇಳಿದಾಗ, ಹೌದಾ, ನನ್ನ ಮಗಳು ಮದುವೆಯಾಗುತ್ತಿದ್ದಾಳಾ? ನನ್ನನ್ನು ಮದುವೆಗೆ ಕರೆಯುವುದನ್ನು ಮರೆಯಬೇಡಿ. ಮದುವೆ ಎಲ್ಲಿ ನಡೆಯುತ್ತಿದೆ? ನಾನು ಬರುತ್ತೇನೆ. ನನಗೆ ಇದುವರೆಗೂ ಈ ವಿಚಾರ ಗೊತ್ತಿಲ್ಲ’ ಎಂದು ಕಾಲೆಳೆದಿದ್ದಾರೆ. 

ಜೈ ಶ್ರೀರಾಮ್ ಘೋಷಣೆ, ಟ್ರೋಲ್ ಮತ್ತು ಸಂಸದೆ ನುಸ್ರತ್ ಜಹಾನ್!

ಶ್ರದ್ಧಾ ಕಪೂರ್ ಹಾಗೂ ರೋಹನ್ ಕಳೆದ 2 ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. 2020 ಕ್ಕೆ ಇವರಿಬ್ಬರೂ ಹಸೆಮಣೆ ಏರಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. 

ಶ್ರದ್ಧಾ ಪ್ರಭಾಸ್ ಜೊತೆ ಸಾಹೋ ಚಿತ್ರದಲ್ಲಿ ನಟಿಸಿದ್ದು ಆಗಸ್ಟ್ 15 ಕ್ಕೆ ರಿಲೀಸ್ ಆಗಲಿದೆ.