ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಬ್ಬರೂ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶಿವಣ್ಣ ಹಾಗೂ ಸುದೀಪ್ ಜತೆಯಾಗುತ್ತಿರುವ ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸದ್ದು ಮಾಡುತ್ತಿರುವಾಗಲೇ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಶುರುವಾಗುತ್ತಿದೆ. ಅಂದಹಾಗೆ ಶಿವಣ್ಣ ಹಾಗೂ ಯಶ್ ಒಟ್ಟಿಗೆ ನಟಿಸುತ್ತಿರುವ ಇನ್ನೂ ಹೆಸರಿಡದ ಈ ಚಿತ್ರವನ್ನು ರಾಕ್‌ ಲೈನ್‌ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ ನಿರ್ಮಾಪಕರು ಹಾಗೂ ಇಬ್ಬರ ನಾಯಕ ನಟರ ಜತೆ ಮಾತುಕತೆ ಆಗಿದ್ದು, ಉಳಿದ ವಿವರಗಳು ಗುಟ್ಟಾಗಿವೆ.

ಕನ್ನಡದಲ್ಲಿ ಮತ್ತೊಂದು ಬಿಗ್ ಮಲ್ಟಿಸ್ಟಾರ್ ಸಿನಿಮಾ ಸೆಟ್ಟೇರುತ್ತಿದೆ. ಈ ಬಿಗ್ ಸ್ಟಾರ್‌ಗಳು ಬೇರೆ ಯಾರೂ ಅಲ್ಲ, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್.

ಹೌದು, ಈ ಇಬ್ಬರು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶಿವಣ್ಣ ಹಾಗೂ ಸುದೀಪ್ ಜತೆಯಾಗುತ್ತಿರುವ ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸದ್ದು ಮಾಡುತ್ತಿರುವಾಗಲೇ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಶುರುವಾಗುತ್ತಿದೆ. ಅಂದಹಾಗೆ ಶಿವಣ್ಣ ಹಾಗೂ ಯಶ್ ಒಟ್ಟಿಗೆ ನಟಿಸುತ್ತಿರುವ ಇನ್ನೂ ಹೆಸರಿಡದ ಈ ಚಿತ್ರವನ್ನು ರಾಕ್‌ ಲೈನ್‌ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ ನಿರ್ಮಾಪಕರು ಹಾಗೂ ಇಬ್ಬರ ನಾಯಕ ನಟರ ಜತೆ ಮಾತುಕತೆ ಆಗಿದ್ದು, ಉಳಿದ ವಿವರಗಳು ಗುಟ್ಟಾಗಿವೆ.

ಹಾಗೆ ನೋಡಿದರೆ ನಟ ಯಶ್ ಈಗಾಗಲೇ ಶಿವಣ್ಣ ಚಿತ್ರದಲ್ಲಿ ನಟಿಸಿದ್ದಾರೆ. ಅಗ್ನಿ ಶ್ರೀಧರ್ ನಿರ್ದೇಶನ ಮಾಡಿದ ‘ತಮಸ್ಸು’ ಚಿತ್ರದಲ್ಲಿ ಇಮ್ರಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇಬ್ಬರು ನಾಯಕ ನಟರಾಗಿ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ‘ನಾನು ಮತ್ತು ಶಿವಣ್ಣ ಒಟ್ಟಿಗೆ ನಟಿಸುತ್ತಿರುವುದು ನಿಜ. ಶಿವಣ್ಣ ಕೂಡ ಒಪ್ಪಿಕೊಂಡಿದ್ದಾರೆ. ಈಗಷ್ಟೆ ಮಾತುಕತೆ ಮುಗಿಸಿದ್ದೇವೆ. ಸದ್ಯದಲ್ಲೇ ಸೆಟ್ಟೇರಲಿದೆ. ಶಿವಣ್ಣ ಅಂದರೆ ನನಗೆ ಇಷ್ಟ. ಈಗ ಅವರ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎನ್ನುತ್ತಾರೆ ನಟ ಯಶ್. ಅಲ್ಲಿಗೆ ಕನ್ನಡದಲ್ಲಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಸೆಟ್ಟೇರಲಿದೆ.