ಶಿವರಾಜ್ ಕುಮಾರ್ ನಿರ್ಮಾಣದಲ್ಲಿ ಮೂಡಿ ಬರಲಿದೆ ಭೈರತಿ ರಣಗಲ್ಲು | ಶಿವಣ್ಣ ಅವರಿಗೆ ‘ಭೈರತಿ ರಣಗಲ್’ 125 ನೇ ಸಿನಿಮಾ | 

ಬೆಂಗಳೂರು (ಅ. 31): ಶಿವಣ್ಣ ಹಾಗೂ ಮಫ್ತಿ ನರ್ತನ್ ಕಾಂಬಿನೇಷನ್‌ನಲ್ಲಿ ‘ಭೈರತಿ ರಣಗಲ್’ ಸಿನಿಮಾ ಬರಲಿದೆ. ಈ ಚಿತ್ರದ ಲೇಟೆಸ್ಟ್ ಅಪ್‌ಡೇಟ್ ಎಂದರೆ ಈ ಚಿತ್ರವನ್ನು ಖುದ್ದು ಶಿವರಾಜ್‌ಕುಮಾರ್ ನಿರ್ಮಿಸಲಿದ್ದಾರೆ. ಶಿವಣ್ಣ ಇದೇ ಮೊದಲ ಬಾರಿಗೆ ತಮ್ಮ ಸಿನಿಮುತ್ತು ಕ್ರಿಯೇಷನ್ ಮೂಲಕ ಚಿತ್ರ ನಿರ್ಮಾಣಕ್ಕಿಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಪಿ ಶ್ರೀಕಾಂತ್ ಅಥವಾ ಜಯಣ್ಣ ‘ಭೈರತಿ ರಣಗಲ್’ ಚಿತ್ರವನ್ನು ನಿರ್ಮಿಸಲಿದ್ದಾರೆಂಬ ಸುದ್ದಿ ಇತ್ತು. ಯಾಕೆಂದರೆ ಭೈರತಿ ರಣಗಲ್ ಎನ್ನುವ ಹೆಸರು ‘ಮಫ್ತಿ’ ಚಿತ್ರದಲ್ಲಿ ಶಿವಣ್ಣ ಪಾತ್ರಧಾರಿಯ ಹೆಸರು. ಈ ಚಿತ್ರವನ್ನು ನಿರ್ಮಿಸಿದ್ದು ಜಯಣ್ಣ. ಆದರೆ, ಈ ಕ್ಯಾರೆಕ್ಟರ್ ಹೆಸರಿನಲ್ಲಿ ಸಿನಿಮಾ ಮಾಡುವುದಾಗಿ ಘೋಷಿಸಿದ್ದು ನಿರ್ಮಾಪಕ ಕೆಪಿ ಶ್ರೀಕಾಂತ್. ಹೀಗಾಗಿ ಇಬ್ಬರ ಪೈಕಿ ಯಾರಾದರೊಬ್ಬರು ‘ಭೈರತಿ ರಣಗಲ್’ ಚಿತ್ರಕ್ಕೆ ನಿರ್ಮಾಪಕರಾಗುತ್ತಾರೆಂದು ಅಂದುಕೊಳ್ಳಲಾಗಿತ್ತು. ಆದರೆ, ಈಗ ಬಂದಿರುವ ಖಚಿತ ಮಾಹಿತಿಯಂತೆ ಶಿವರಾಜ್‌ಕುಮಾರ್ ಚಿತ್ರ ನಿರ್ಮಾಪಕರಾಗುತ್ತಿದ್ದಾರೆ.

ಶಿವಣ್ಣ ಅವರಿಗೆ ‘ಭೈರತಿ ರಣಗಲ್’ 125 ನೇ ಸಿನಿಮಾ. ನಿರ್ದೇಶಕ ನರ್ತನ್ ‘ಮಫ್ತಿ’ ನಂತರ ಮತ್ತೊಂದು ಪಕ್ಕಾ ಕಮರ್ಷಿಯಲ್ ಆ್ಯಕ್ಷನ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ‘ಚಿತ್ರದ ಟೈಟಲ್‌ಗೆ ತಕ್ಕಂತೆ ಕತೆ ಮಾಡಿಕೊಂಡಿದ್ದೇನೆ. ಮಫ್ತಿ ಚಿತ್ರದಲ್ಲಿ ಭೈರತಿ ರಣಗಲ್ ಎನ್ನುವ ಹೆಸರು ಈ ಮಟ್ಟಿಗೆ ಪ್ರಸಿದ್ಧಿ ಆಗುತ್ತದೆಂದು ನಾನು ಅಂದುಕೊಂಡಿರಲಿಲ್ಲ. ಆದರೆ, ಸಿನಿಮಾ ನೋಡಿದವರು ಭೈರತಿ ರಣಗಲ್ ಕ್ಯಾರೆಕ್ಟರ್‌ಗೆ ತುಂಬಾ ಕೆನೆಕ್ಟ್ ಆದರು. ಹೀಗಾಗಿ ಅದೊಂದು ಕ್ಯಾರೆಕ್ಟರ್ ಹೆಸರಾಗಿ ಮಾತ್ರ ಉಳಿದುಕೊಳ್ಳದೆ ಚಿತ್ರವೊಂದಕ್ಕೆ ಟೈಟಲ್ ಆಗುತ್ತಿದೆ’ ಎನ್ನುತ್ತಾರೆ ನಿರ್ದೇಶಕ ನರ್ತನ್.