ಲಂಡನ್‌ನಲ್ಲಿ ಶಿವರಾಜ್‌ಕುಮಾರ್‌ಗೆ ಭುಜದ ಶಸ್ತ್ರಚಿಕಿತ್ಸೆ | ಇನ್ನೂ 20 ದಿನ ಲಂಡನ್‌ನಲ್ಲೇ ಇರಲಿದ್ದಾರೆ | 

ನಟ‌ ಶಿವರಾಜ್ ಕುಮಾರ್ ಭುಜ ನೋವಿನಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆ ಗಾಗಿ ಲಂಡನ್ ಗೆ ತೆರಳಿದ್ದಾರೆ. ಇಂದು ಶಸ್ತ್ರಚಿಕಿತ್ಸೆ ನಡೆದಿದೆ.

ಪತ್ರಕರ್ತನ ಕ್ಷಮೆಯಾಚಿಸಲು ನೋ ಎಂದ ಕಂಗನಾ; ಮಣಿದ ಏಕ್ತಾ ಕಪೂರ್

ಶಿವರಾಜ್ ಕುಮಾರ್ ಜೊತೆ ಪತ್ನಿ ಗೀತಾ ಶಿವರಾಜ್ ಕುಮಾರ್, ತಮ್ಮ ಪುನೀತ್ ರಾಜ್ ಕುಮಾರ್ ಕೂಡಾ ಹೋಗಿದ್ದಾರೆ. 20 ದಿನ ಅಲ್ಲಿಯೇ ರೆಸ್ಟ್ ಪಡೆದು ನಂತರ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಶಿವಣ್ಣನ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಹಿನ್ನಲೆಯಲ್ಲಿ ಶಿವಣ್ಣನ ಅಭಿಮಾನಿಗಳು ಗವಿಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

 ಜುಲೈ 12 ರಂದು ಶಿವಣ್ಣ ಬರ್ತಡೇ ಇದ್ದು, ಲಂಡನ್ ನಲ್ಲಿ ಇರುವುದರಿಂದ ಬರ್ತಡೇ ಆಚರಿಸಿಕೊಳ್ಳುತ್ತಿಲ್ಲ.