ಬಾಲಿವುಡ್ ನಟಿ ಕಂಗನಾ ರಾಣಾವತ್ ’ ಜಡ್ಜ್ ಮೆಂಟಲ್ ಹೈ ಕ್ಯಾ ಸಿನಿಮಾ ಪ್ರಮೋಶನ್ ನಲ್ಲಿ ಹೈ ಡ್ರಾಮಾ ಸಿಕ್ಕಾಪಟ್ಟೆ ಸುದ್ಧಿಯಾಗಿದೆ. 

ಕಂಗನಾ ರಾಣಾವತ್ ಜಡ್ಜ್ ಮೆಂಟಲ್ ಕ್ಯಾ ಹೇ ಸಿನಿಮಾದ ಪ್ರಮೋಶನ್ ಗೆ ಸುದ್ದಿಗೋಷ್ಠಿ ಕರೆಯಲಾಗಿತ್ತು. ಆ ವೇಳೆ ಪತ್ರಕರ್ತ ಜಸ್ಟಿನ್ ರಾವ್ ಪ್ರಶ್ನೆ ಕೇಳಲು ಆರಂಭಿಸಿದಾಗ ಕಂಗನಾ ಗರಂ ಆಗಿದ್ದಾರೆ. 

ಮಣಿಕರ್ಣಿಕಾ ಸಿನಿಮಾ ಬಿಡುಗಡೆಯಾದಾಗ ಜಸ್ಟೀನ್ ಚಿತ್ರದ ಬಗ್ಗೆ ನೆಗೇಟಿವ್ ಆಗಿ ಬರೆದಿದ್ದರು. ಆ ಸಿಟ್ಟನ್ನು ಜಸ್ಟೀನ್ ಮೇಲೆ ತೋರಿಸಿದ್ದಾರೆ. ಇಬ್ಬರ ನಡುವೆ ವಾಕ್ಸಮರ ನಡೆದಿದೆ. ಪಕ್ಕದಲ್ಲೇ ಇದ್ದ ನಿರ್ಮಾಪಕಿ ಏಕ್ತಾ ಕಪೂರ್ , ರಾಜ್ ಕುಮಾರ್ ರಾವ್ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಇಬ್ಬರೂ ಸುಮ್ಮನಾಗಲಿಲ್ಲ. ಇಬ್ಬರ ನಡುವಿನ ಜಗಳ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಕಂಗನಾ ಹಾಗೂ ಏಕ್ತಾ ಕಪೂರ್ ಘಟನೆ ಬಗ್ಗೆ ಕ್ಷಮೆಯಾಚಿಸಬೇಕೆಂದು ಸಿನಿಮಾ ಪತ್ರಕರ್ತರ ಕೂಟ ಒತ್ತಾಯಪಡಿಸಿತ್ತು. ಏಕ್ತಾ ಕಪೂರ್ ಪ್ರೊಡಕ್ಷನ್ ಹೌಸ್ ಬಾಲಾಜಿ ಟೆಲಿಫಿಲ್ಮ್ ಕ್ಷಮೆಯಾಚಿಸಿದೆ. 

 

 
 
 
 
 
 
 
 
 
 
 
 
 

#JudgeMentallHaiKya ! Love and respect to all❤️🙏🏼

A post shared by Erk❤️rek (@ektaravikapoor) on Jul 9, 2019 at 11:52pm PDT

ಆದರೆ ಕಂಗನಾ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ. ಸಾಧ್ಯತೆಗಳನ್ನು ತಳ್ಳಿ ಹಾಕಿದ್ದಾರೆ.