Asianet Suvarna News Asianet Suvarna News

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ; ಸ್ಯಾಂಡಲ್‌ವುಡ್ ಬೆಂಬಲ

ಮುಖ್ಯಮಂತ್ರಿ, ಮೈಸೂರು-ಕೊಡಗು ಸಂಸದ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳನ್ನು ಎಚ್ಚರಿಸಲು  'ವಿ ನೀಡ್‌ ಎಮರ್ಜೆನ್ಸಿ ಹಾಸ್ಪಿಟಲ್‌ ಇನ್‌ ಕೊಡಗು' ಎಂಬ ಹ್ಯಾಶ್ ಟ್ಯಾಗ್‌ ಅಡಿಯಲ್ಲಿ ಟ್ವಿಟರ್‌ ಅಭಿಯಾನ ಶುರುವಾಗಿದ್ದು, ಜಿಲ್ಲೆಯ ಯುವ ಜನತೆ ಈ ಅಭಿಯಾನಕ್ಕೆ ದೊಡ್ಡ ಪ್ರಮಾಣದಲ್ಲಿ ಕೈ ಜೋಡಿಸಿದ್ದಾರೆ.

Shivaraj Kumar supports to campaign for multi-specialty hospital in kodagu
Author
Bengaluru, First Published Jun 13, 2019, 4:39 PM IST

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಮುಂದಿಟ್ಟುಕೊಂಡು ಕೊಡಗಿನಲ್ಲೂ ಟ್ವಿಟರ್‌ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. 

'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರಬಿದ್ದ ಸಿದ್ಧಾರ್ಥ್

ಐಶಾರಾಮಿ ರೆಸಾರ್ಟ್, ಹೋಮ್ ಸ್ಟೇ ಇದೆ. ಆದ್ರೆ ಸುಸಜ್ಜಿತ ಆಸ್ಪತ್ರೆ ಇಲ್ಲ. #WeNeedEmergencyHospitalInKodagu ಎಂದು ಅಭಿಯಾನ ಆರಂಭವಾಗಿದೆ.

ಮುಖ್ಯಮಂತ್ರಿ, ಮೈಸೂರು-ಕೊಡಗು ಸಂಸದ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳನ್ನು ಎಚ್ಚರಿಸಲು  'ವಿ ನೀಡ್‌ ಎಮರ್ಜೆನ್ಸಿ ಹಾಸ್ಪಿಟಲ್‌ ಇನ್‌ ಕೊಡಗು' ಎಂಬ ಹ್ಯಾಶ್ ಟ್ಯಾಗ್‌ ಅಡಿಯಲ್ಲಿ ಟ್ವಿಟರ್‌ ಅಭಿಯಾನ ಶುರುವಾಗಿದ್ದು, ಜಿಲ್ಲೆಯ ಯುವ ಜನತೆ ಈ ಅಭಿಯಾನಕ್ಕೆ ದೊಡ್ಡ ಪ್ರಮಾಣದಲ್ಲಿ ಕೈ ಜೋಡಿಸಿದ್ದಾರೆ.

ಟ್ವಿಟ್ಟರ್ ಖಾತೆ ಇಲ್ಲದವರು ಫೇಸ್‌ಬುಕ್ ಹಾಗೂ ವಾಟ್ಸಪ್‌ಗಳಲ್ಲಿ ಜಿಲ್ಲೆಯ ಯುವ ಸಮೂಹ ದೊಡ್ಡ ಸಂಖ್ಯೆಯಲ್ಲಿ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. 

 

 
 
 
 
 
 
 
 
 
 
 
 
 

#WeNeedEmergencyHospitalInKodagu

A post shared by Dr.Shivarajkumar (@dr.shivarajkumar) on Jun 13, 2019 at 12:12am PDT

ನಟ ಶಿವರಾಜ್ ಕುಮಾರ್ ಈ ಅಭಿಯಾನಕ್ಕೆ ಸ್ಪಂದಿಸಿದ್ದಾರೆ. " ಕೊಡಗು ಬಗ್ಗೆ ನಮಗೆ ಹೆಮ್ಮೆಯಿದೆ. ಕೊಡಗಿಗೆ ಸುಸಜ್ಜಿತ ಆಸ್ಪತ್ರೆ ಇಲ್ಲವೆಂದು ಕೇಳಲ್ಪಟ್ಟೆ. ನೀವ್ಯಾರೂ ನೊಂದುಕೊಳ್ಳುವ ಅಗತ್ಯ ಇಲ್ಲ. ನಾವೆಲ್ಲಾ ನಿಮ್ಮ ಜೊತೆಗಿದ್ದೇವೆ. ಚಿತ್ರರಂಗದಿಂದ ಸರ್ಕಾರಕ್ಕೆ ಒತ್ತಾಯಪಡಿಸುತ್ತೇವೆ. ನೀವು ಹೆದರಬೇಡಿ. ನಾವಿದ್ದೇವೆ ಎಂದು"  ಶಿವಣ್ಣ ಕೊಡಗಿನ ಜನತೆಗೆ ಹೇಳಿದ್ದಾರೆ. 

Follow Us:
Download App:
  • android
  • ios