ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಚಿತ್ರದ ಶಿವರಾಜ್ ಪಾತ್ರ ಈಗ ರಿವೀಲ್ ಆಗಿದೆ. ಕಾಶ್ಮೀರದಲ್ಲಿ ಈಗ ಶಿವರಾಜ್ ಕುಮಾರ್ ಶೂಟಿಂಗ್ ಮಾಡ್ತಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಚಿತ್ರದ ಶಿವರಾಜ್ ಪಾತ್ರ ಈಗ ರಿವೀಲ್ ಆಗಿದೆ. ಕಾಶ್ಮೀರದಲ್ಲಿ ಈಗ ಶಿವರಾಜ್ ಕುಮಾರ್ ಶೂಟಿಂಗ್ ಮಾಡ್ತಿದ್ದಾರೆ.
ಚಿತ್ರದಲ್ಲಿ ಒಬ್ಬ ಆರ್ಮೀ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ಮತ್ತು ವಿಜಯ್ ರಾಘವೇಂದ್ರ ಕೂಡ ಶಿವರಾಜ್ ಕುಮಾರ್ ಗೆ ಜೊತೆಯಾಗಿದ್ದಾರೆ. ಇಡೀ ತಂಡ ಈಗ ಕಾಶ್ಮೀರದಲ್ಲಿದೆ. ಚಿತ್ರದ ನಿರ್ಮಾಪಕ ತರುಣ್ ಶಿವಪ್ಪ ಸುವರ್ಣ ನ್ಯೂಸ್ ಗೆ ಅಲ್ಲಿಯ ಮೇಕಿಂಗ್ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಶೂಟಿಂಗ್ ವೇಳೆ ತೆಗೆದ ಫೋಟೋಗಳನ್ನೂ ಕಳುಹಿಸಿದ್ದಾರೆ.
ಸಹನಾ ಮೂರ್ತಿ ನಿರ್ದೇಶನದ ಲೀಡರ್ ಚಿತ್ರದಲ್ಲಿ ಪ್ರಣಿತಾ ಅಭಿನಯಿಸಿದ್ದಾರೆ. ಶ್ರೀನಗರ ಕಿಟ್ಟಿ ಪುತ್ರಿ ಪರಿಣಿತಾ ಕೂಡಾ ಈ ಚಿತ್ರದಲ್ಲಿ ಅಭಿನಯಿಸಿದ್ದಾಳೆ.