ಸಿನಿಮಾ ಮುಹೂರ್ತದ ರೀತಿಯೇ, ಕಂಠೀರವ ಸ್ಟುಡಿಯೋದಲ್ಲಿ ಸೀರಿಯಲ್ ನ ಪೂಜೆ ನಡೆಯಿತು.
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಪುತ್ರಿ ನಿವೇದಿತಾ ಇದೀಗ ಪ್ರೊಡ್ಯೂಸರ್ ಆಗಿದ್ದಾರೆ. ಸಣ್ಣ ವಯಸ್ಸಿನಲ್ಲೇ ತಂದೆ ಶಿವರಾಜ್ ಜೊತೆ ಅಂಡಮಾನ್ ಮೂವಿಯಲ್ಲಿ ಬಾಲ ನಟಿಯಾಗಿ ನಟಿಸಿದ್ದ ನಿವೇದಿತಾ, ಧಾರಾವಾಹಿಗೆ ನಿರ್ಮಾಪಕಿಯಾಗುವ ಮೂಲಕ ಮತ್ತೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಶಿವರಾಜ್ ಕುಮಾರ್ ಪ್ರೊಡಕ್ಷನ್ ಹೌಸ್ ಶ್ರೀ ಮುತ್ತು ಸಿನಿ ಸರ್ವೀಸ್ ಶುಭಾರಂಭವಾಗಿದೆ. ತಮ್ಮ ಮೊದಲ ಪ್ರೋಡಕ್ಷನ್ನ ಮಾನಸ ಸರೋವರ ಸೀರಿಯಲ್ ಮೂಲಕ ಕನ್ನಡಿಗರಿಗೆ ನೀಡಲು ಮುಂದಾಗಿದ್ದಾರೆ. ಮಾನಸ ಸರೋವರದ ಮೂಲಕ ಜನರ ಮನಗೆದ್ದಿದ್ದ ಶ್ರೀ ನಾಥ್, ಪದ್ಮವಾಸಂತಿ ಮತ್ತು ರಾಮಕೃಷ್ಣ ಜೋಡಿಯೆ, ಈ ಧಾರಾವಾಹಿಯಲ್ಲೂ ನಟಿಸ್ತಿದ್ದು..ಸಿನಿಮಾ ಮುಹೂರ್ತದ ರೀತಿಯೇ, ಕಂಠೀರವ ಸ್ಟುಡಿಯೋದಲ್ಲಿ ಸೀರಿಯಲ್ ನ ಪೂಜೆ ನಡೆಯಿತು. ಇಂದೇ ಮೊದಲ ದೃಶ್ಯದ ಶೂಟಿಂಗ್ ಕೂಡ ಮಾಡಲಾಯಿತು.. ನಿರ್ದೇಶಕ ರಾಮ್ ಜೈಶೀಲ್ ವೈದ್ಯ ಈ ಸೀರಿಯಲ್ ಡೈರೆಕ್ಟ್ ಮಾಡುತ್ತಿದ್ದಾರೆ.
