ಶಿವಣ್ಣ ಈಗೇನ್ ಮಾಡ್ತಾ ಇದ್ದಾರೆ? ಯಾವ ಸಿನಿಮಾ ಸದ್ಯದಲ್ಲಿ ಸೆಟ್ಟೇರಲಿದೆ?

First Published 25, Jan 2018, 6:19 PM IST
Shivanna Busy With New Film
Highlights

ಪ್ರಸ್ತುತ ಕನ್ನಡದಲ್ಲಿ ಅತಿ ಹೆಚ್ಚು ಸಿನಿಮಾಗಳು ಹೊಂದಿರುವ ಸ್ಟಾರ್ ಶಿವರಾಜ್‌ಕುಮಾರ್. ಅವರ ಹುಟ್ಟು ಹಬ್ಬ ಸೇರಿದಂತೆ ಯಾವುದೇ ವಿಶೇಷ ದಿನಗಳು ಬಂದರೆ ಅವರ ಹೆಸರಿನಲ್ಲಿ ಎರಡ್ಮೂರು ಸಿನಿಮಾಗಳಾದರೂ ಪ್ರಕಟಣೆ ಆಗುತ್ತವೆ. ಆದರೆ, ಯಾವ ಸಿನಿಮಾ ಯಾವಾಗ ಸೆಟ್ಟೇರುತ್ತದೆಂಬುದು ಅವರ ಹೆಸರಿನಲ್ಲಿ ಸಿನಿಮಾ ಜಾಹೀರಾತು ಕೊಟ್ಟವರಿಗೂ ಐಡಿಯಾ ಇರಲ್ಲ.

ಬೆಂಗಳೂರು (ಜ.25): ಪ್ರಸ್ತುತ ಕನ್ನಡದಲ್ಲಿ ಅತಿ ಹೆಚ್ಚು ಸಿನಿಮಾಗಳು ಹೊಂದಿರುವ ಸ್ಟಾರ್ ಶಿವರಾಜ್‌ಕುಮಾರ್. ಅವರ ಹುಟ್ಟು ಹಬ್ಬ ಸೇರಿದಂತೆ ಯಾವುದೇ ವಿಶೇಷ ದಿನಗಳು ಬಂದರೆ ಅವರ ಹೆಸರಿನಲ್ಲಿ ಎರಡ್ಮೂರು ಸಿನಿಮಾಗಳಾದರೂ ಪ್ರಕಟಣೆ ಆಗುತ್ತವೆ. ಆದರೆ, ಯಾವ ಸಿನಿಮಾ ಯಾವಾಗ ಸೆಟ್ಟೇರುತ್ತದೆಂಬುದು ಅವರ ಹೆಸರಿನಲ್ಲಿ ಸಿನಿಮಾ ಜಾಹೀರಾತು ಕೊಟ್ಟವರಿಗೂ ಐಡಿಯಾ ಇರಲ್ಲ.

ಈ ಮಧ್ಯೆ ದೊಡ್ಡ  ಮಟ್ಟದಲ್ಲಿ ಸೆಟ್ಟೇರಿದ್ದು ‘ಎಸ್‌ಆರ್‌ಕೆ’ ಸಿನಿಮಾ. ಡಾ. ರಾಜ್‌ಕುಮಾರ್ ಕುಟುಂಬದ ಹತ್ತಿರದ ಸಂಬಂಧಿ ಲಕ್ಕಿ ಗೋಪಾಲ್ ಇದರ ನಿರ್ದೇಶಕ. ಈಗ ನೋಡಿದರೆ ಸಾಹಸ ನಿರ್ದೇಶಕ  ರವಿವರ್ಮ ನಿರ್ದೇಶನದ ‘ರುಸ್ತುಂ’ ಚಿತ್ರ ಸದ್ದು ಮಾಡುತ್ತಿದೆ. ಈ ನಡುವೆ ‘ಟಗರು-೨’ ಅಧಿಕೃತವಾಗಿ ಸೆಟ್ಟೇರಿದೆ. ಹಾಗಾದರೆ ಯಾವ ಸಿನಿಮಾ ಯಾವಾಗ ಚಿತ್ರೀಕರಣದ ಮೈದಾನಕ್ಕಿಳಿಯುತ್ತದೆ ಎಂಬ ಕುತೂಹಲ ಬಹುತೇಕರನ್ನು  ಕಾಡುತ್ತಿದೆ.

ಶಿವಣ್ಣ ಈಗ ಏನ್ ಮಾಡ್ತಾ ಇದ್ದಾರೆ?

1. ಸದ್ಯಕ್ಕೆ ಶಿವಣ್ಣ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈಗಷ್ಟೆ  ಬೆಂಗಳೂರಿನಲ್ಲಿ ಮಿನರ್ವ ಮಿಲ್‌'ನಲ್ಲಿ ಅದರ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ಮಾಡಲಾಗಿದೆ. ಇನ್ನು 20 ದಿನಗಳ ಚಿತ್ರೀಕರಣ ನಡೆದರೆ  ‘ದಿ ವಿಲನ್’ಗೆ ಚಿತ್ರೀಕರಣ ಮುಕ್ತಾಯವಾಗಲಿದೆ.

2.  ‘ದಿ ವಿಲನ್’ ನಂತರ ಮಲಯಾಳಂನ  ‘ಒಪ್ಪಂ’ ರೀಮೇಕ್ ಆದ ‘ಕವಚ’ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ಚಿತ್ರೀಕರಣ ಏಪ್ರಿಲ್‌ವರೆಗೂ ನಡೆಯಲಿದೆ. ಇದರ ನಂತರಏಕಕಾಲಕ್ಕೆ ಎರಡು ಸಿನಿಮಾಗಳು ಸೆಟ್ಟೇರಲಿವೆ.

3. ಲಕ್ಕಿ ಗೋಪಾಲ ನಿರ್ದೇಶನದ ‘ಎಸ್‌'ಆರ್‌'ಕೆ’ ಸಿನಿಮಾ ಮೇ ತಿಂಗಳಲ್ಲಿ ಚಿತ್ರೀಕರಣ ಮಾಡಿಕೊಳ್ಳದೆ. ಈ ಸಿನಿಮಾ ಜತೆಗೆ ರವಿವರ್ಮ ನಿರ್ದೇಶನದ ‘ರುಸ್ತುಂ’ ಕೂಡ ಮೇ ತಿಂಗಳಲ್ಲೇ ಶುರುವಾಗಲಿದೆ. ಅಲ್ಲಿಗೆ ಒಂದೇ ತಿಂಗಳಲ್ಲಿ ಏಕಕಾಲಕ್ಕೆ ಎರಡು ಸಿನಿಮಾಗಳ ಚಿತ್ರೀಕರಣಕ್ಕೆ ಸ್ವತಃ ಶಿವರಾಜ್‌ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

4.  ‘ಟಗರು-2’ ಈ ವರ್ಷ ಶುರುವಾಗಲ್ಲ. ಈ ವರ್ಷ ಟಗರು, ಕವಚ, ದಿ ವಿಲನ್ ತೆರೆಗೆ ಬರಲಿವೆ. ಮುಂದಿನ ವರ್ಷ ‘ಎಸ್‌ಆರ್‌ಕೆ’ ಹಾಗೂ ‘ರುಸ್ತುಂ’ ಸಿನಿಮಾ ತಯಾರಾಗಲಿವೆ. ಇದರ ಹೊರತಾಗಿ ಶಿವಣ್ಣ ಬೇರೆ ಯಾವುದೇ ಚಿತ್ರಗಳಿಗೆ ಅಧಿಕೃತವಾಗಿ ಬುಕ್ ಆಗಿಲ್ಲ.

 

loader