ಹುಬ್ಬಳ್ಳಿಯ ಸಿದ್ದಾರೂಢಮಠದಲ್ಲೂ ಚಿತ್ರೀಕರಣ ನಡೆಯುತ್ತಿದ್ದು ಶಿವರಾಜ್​ಕುಮಾರ್​ ಸಿದ್ದಾರೂಢ ಸ್ವಾಮಿಯವರ ದರ್ಶನ ಪಡೆದರು.

ಹುಬ್ಬಳ್ಳಿ (ಮಾ.27): ಉತ್ತರ ಕರ್ನಾಟಕ ಭಾಗದಲ್ಲಿ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಅಭಿನಯದ ಬಂಗಾರ- ಸನ್​ ಆಫ್​ ಬಂಗಾರದ ಮನುಷ್ಯ ಸಿನಿಮಾ ಚಿತ್ರೀಕರಣ ಭರದಿಂದ ನಡೆಯುತ್ತಿದೆ.

ಹುಬ್ಬಳ್ಳಿಯ ಸಿದ್ದಾರೂಢಮಠದಲ್ಲೂ ಚಿತ್ರೀಕರಣ ನಡೆಯುತ್ತಿದ್ದು ಶಿವರಾಜ್​ಕುಮಾರ್​ ಸಿದ್ದಾರೂಢ ಸ್ವಾಮಿಯವರ ದರ್ಶನ ಪಡೆದರು.

ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ಹಾಡಿನ ಚಿತ್ರೀಕರಣದ ಹಿನ್ನೆಲೆಯಲ್ಲಿ ಶಿವರಾಜ ಕುಮಾರ ಮಠಕ್ಕೆ ಭೇಟಿ ನೀಡಿದ್ದಾರೆ. ಮೂರು ದಿನಗಳ ಕಾಲ ಉತ್ತರ ಕರ್ನಾಟಕದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ‌ಸವದತ್ತಿ ಎಲ್ಲಮ್ಮನ ದೇವಸ್ಥಾನದಲ್ಲೂ ಚಿತ್ರಿಕರಣ ನಡೆಯಲಿದೆ.

ಸಿದ್ಧಾರೂಢರ ದರ್ಶನದ ಬಳಿಕ ಮಾತನಾಡಿದ ನಟ ಶಿವರಾಜ್ ಕುಮಾರ್ ನಮ್ಮ ಕುಟುಂಬ ಅಪ್ಪಾಜಿ ಕಾಲದಿಂದಲೂ ಮಠಕ್ಕೆ ಭೇಟಿ ನೀಡುತ್ತಾ ಬಂದಿದ್ದು, ಆ ಪರಂಪರೆಯನ್ನು ನಾವು ಇಂದು ಮುಂದುವರೆಸುತ್ತೇವೆ ಎಂದರು.