ಬೆಂಗಳೂರು(ಡಿ.07): ಇದೇ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತೆಲುಗು ಚಿತ್ರವೊಂದರಲ್ಲಿ ಅಭಿನಯಿಸಿದ್ದಾರೆ.

ಇಲ್ಲಿಯವರೆಗೂ ಕನ್ನಡವಲ್ಲದೆ ಬೇರೆ ಯಾವ ಭಾಷೆಯಲ್ಲೂ ಅಭಿನಯಿಸದ ಶಿವಣ್ಣ, ನಂದಮೂರಿ ಬಾಲಕೃಷ್ಣರ 100ನೇ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ರಾಜನ ಗೆಟಪ್​'ನಲ್ಲಿ ಕಾಣಿಸಿಕೊಂಡಿದ್ದಾರೆ.

ಎನ್​ ಟಿ ರಾಮಾರಾವ್ ಅವರ ಪುತ್ರ ಬಾಲಕೃಷ್ಣ, ಶಿವರಾಜ್​ಕುಮಾರ್​ ಅವರ ಆತ್ಮೀಯರು. ಹೀಗಾಗಿ ಆತ್ಮೀಯ ಆಹ್ವಾನ ನಿರಾಕರಿಸದೆ ಶಿವರಾಜ್​ಕುಮಾರ್ ಸದ್ದಿಲ್ಲದೆ ಪೌರಾಣಿಕ ಚಿತ್ರವೊಂದರಲ್ಲಿ ಅಭಿನಯಿಸಿ ಬಂದಿದ್ದಾರೆ.