ವಯಸ್ಸು 44 ಆದ್ರೂ ನೋಡಲು 22ರ ಹುಡುಗಿ, ಯೋಗ, ಜಿಮ್, ವರ್ಕೌಟ್ ಮಾಡಿಕೊಂಡು ಫಿಟ್ನೆಸ್ ಕಾಪಾಡಿಕೊಂಡಿರುವ ಮಂಗಳೂರು ಹುಡುಗಿ ಶಿಲ್ಪಾ ಶೆಟ್ಟಿ ಕುಂದ್ರಾ ಆಯುರ್ವೇದಿಕ್ ಕಂಪನಿಯೊಂದರಿಂದ ಬಂದ 10ಕೋಟಿ ಜಾಹಿರಾತನ್ನು ತಿರಸ್ಕರಿಸಿದ್ದಾರೆ. ಮಾಧ್ಯಮದ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ಆಯುರ್ವೇದ ಕಂಪನಿಯೊಂದು ಸ್ಲಿಮ್ ಆಗುವ ಮಾತ್ರೆಯ ಜಾಹೀರಾತು ನೀಡಲು 10 ಕೋಟಿ ಆಫರ್ ನೀಡಿ ಸಂಪರ್ಕ ಮಾಡಿದರಂತೆ. ನೈಸರ್ಗಿಕ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವ ಶಿಲ್ಪಾಗೆ ಇಂತಹ ಮಾತ್ರೆಗಳ ಬಗ್ಗೆ ಭರವಸೆ ಇಲ್ಲದ ಕಾರಣ ಯಾವುದೇ ರೀತಿಯ ಪ್ರಕಟಣೆ ನೀಡುವುದು ಸರಿಹೋಗುವುದಿಲ್ಲವೆಂದು ರಿಜೆಕ್ಟ್ ಮಾಡಿದರಂತೆ.

2 ಕೋಟಿ ಆಫರನ್ನು ನಿರಾಕರಿಸಿದ್ರಾ ಸಾಯಿಪಲ್ಲವಿ?

ಈ ಹಿಂದೆ ಸಾಯಿ ಪಲ್ಲವಿಗೆ ಫೇರ್ ನೆಸ್ ಬ್ರಾಂಡ್‌ ಕಂಪನಿಯೊಂದು ಅಪ್ರೋಚ್‌ ಮಾಡಿತ್ತು. ಆದರೆ ಸೌಂದರ್ಯವರ್ಧಕಗಳ ಬಗ್ಗೆ ಯಾವುದೇ ನಂಬಿಕೆ ಇಲ್ಲ ಇಂತಹ ಪ್ರಾಡೆಕ್ಟ್‌ ನಮ್ಮ ಆತ್ಮ ವಿಶ್ವಾಸ ಹಾಳು ಮಾಡುತ್ತದೆ ಎಂದು ಹೇಳಿ ನಿರಾಕರಿಸಿದ್ದರು.