’ಪತಿ’ ಹುಡುಕಾಟದಲ್ಲಿದ್ದಾರೆ ಶೀತಲ್ ಶೆಟ್ಟಿ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Sep 2018, 12:25 PM IST
Sheethal Shetty's Film Pathibeku.com released today
Highlights

ನಿರೂಪಕಿ, ನಟಿ ಶೀತಲ್ ಶೆಟ್ಟಿಯವರ ಪತಿಬೇಕು.ಕಾಮ್ ಇಂದು ತೆರೆಗೆ ಬರುತ್ತಿದೆ. ಈ ಹೆಸರೇ ಬಾರೀ ನಿರೀಕ್ಷೆ ಮೂಡಿಸಿದೆ. ಟೀಸರ್ ಬಾರೀ ಸದ್ದು ಮಾಡುತ್ತಿದೆ. 

ಬೆಂಗಳೂರು (ಸೆ. 07): ಜನಪ್ರಿಯ ನಿರೂಪಕಿ ಶೀತಲ್ ಶೆಟ್ಟಿ ಅಭಿನಯದ ‘ಪತಿಬೇಕು.ಕಾಮ್’ ಇಂದು ತೆರೆಗೆ ಬರುತ್ತಿದೆ. ಶ್ರೀನಿವಾಸ್, ಮಂಜುನಾಥ್ ಹಾಗೂ ರಾಕೇಶ್ ಈ ಚಿತ್ರದ ನಿರ್ಮಾಪಕರು.

ನಿರ್ಮಾಣದ ಜತೆಗೆ ಈ ಚಿತ್ರಕ್ಕೆ ರಾಕೇಶ್ ನಿರ್ದೇಶಕರು ಕೂಡ. ಟೈಟಲ್ ಮೂಲಕವೇ ಕುತೂಹಲ ಮೂಡಿಸಿದ ಚಿತ್ರವಿದು. ಯಾಕಂದ್ರೆ, ಅಂತರ್ಜಾಲದಲ್ಲಿ ಈಗ ವಿವಾಹಕ್ಕಾಗಿ ಹುಡುಗ-ಹುಡುಗಿಯರನ್ನು ಹುಡುಕಾಡುವುದು ಸಹಜ. ಅದಕ್ಕಾಗಿಯೇ ಶಾದಿ.ಕಾಮ್ ಸೃಷ್ಟಿಯಾಗಿರುವುದು ನಿಮಗೂ ಗೊತ್ತಿದೆ. ಆದರೆ ‘ಪತಿಬೇಕು.ಕಾಮ್’. ತೆರೆ ಮೇಲೆ ಪತಿ ಹುಡುಕಾಟ ಹೇಗಿರುತ್ತೆ ಅನ್ನೋದು ಇಲ್ಲಿನ ಇಂಟರೆಸ್ಟಿಂಗ್ ಸಂಗತಿ.

ಪತಿ ಹುಡುಕುವ ಹಲವು ಸಂಗತಿಗಳು ಇಲ್ಲಿವೆಯಂತೆ. ಪ್ರೇಕ್ಷಕರಿಗೆ ಮನಸ್ಸಿಗೆ ತಟ್ಟುವಂತಹ ಕತೆಯನ್ನು ತೆರೆಗೆ ತಂದಿದ್ದಾರಂತೆ ನಿರ್ದೇಶಕರು. ಶೀತಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ಅವರೊಂದಿಗೆ ಹರಿಣಿ, ಕೃಷ್ಣ ಅಡಿಗ ಮತ್ತಿತರರು ಇದ್ದಾರೆ.

ಮದುವೆಗಾಗಿ ಗಂಡು ಹುಡುಕುವ ಹಲವಾರು ಪ್ರಸಂಗಗಳು ಚಿತ್ರದಲ್ಲಿವೆ. ಅವೆಲ್ಲ ಇಂದಿನ ಯುವ ಜನಾಂಗಕ್ಕೆ ತುಂಬಾ ಆಪ್ತವಾಗಲಿವೆ ಎನ್ನುತ್ತಾರೆ ನಿರ್ದೇಶಕ ರಾಕೇಶ್. ಯಾಕಪ್ಪಾ ದ್ಯಾವರೇ, ಆಡಿಸ್ತಿಯ ಕ್ಯಾಬರೆ....ಎಂಬ ಹಾಡು ಈ ಚಿತ್ರದಲ್ಲಿ ಅನೇಕ ಸಂಗತಿಗಳನ್ನು ಹೇಳಲಿದೆಯಂತೆ.  ಯೋಗಿ ಛಾಯಾಗ್ರಹಣ, ಕೌಶಿಕ್ ಶರ್ಮ ಸಂಗೀತ, ಜಯಕುಮಾರ್ ಸಂಕಲನ, ಹರ್ಷವರ್ಧನ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. 

 

 

loader