ಮುಂಬೈ (ಫೆ. 02): ಶಾರೂಕ್ ಹಾಗೂ ಐಶ್ವರ್ಯಾ ರೈ ತೆರೆಮೇಲೆ ಲವರ್ಸ್ ಆಗಿ ಕಾಣಿಸಿಕೊಂಡಿದ್ದು ಕಡಿಮೆ. ದೇವದಾಸ್, ಮೊಹಬತೇ ಸಿನಿಮಾದಲ್ಲಿ ಲವರ್ಸ್ ಆಗಿ ಕಾಣಿಸಿಕೊಂಡರೆ ಜೋಶ್ ಸಿನಿಮಾದಲ್ಲಿ ಅಣ್ಣ-ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. 

ರಾವಣ್ ಚಿತ್ರದಲ್ಲಿ ಐಶ್ವರ್ಯಾ ರೈ ಜೊತೆ ನಟಿಸಲು ಶಾರೂಕ್ ಗೆ ಇಷ್ಟವಿತ್ತಂತೆ. ನಿರ್ದೇಶಕ ಮಣಿರತ್ನಂ ಬಳಿ ಅವಕಾಶವನ್ನು ಕೇಳಿದ್ದರಂತೆ. ಆದರೆ ಕೊನೆಗೆ ಐಶ್ವರ್ಯಾ ವಿರುದ್ಧ ಪಾತ್ರದಲ್ಲಿ ನಟಿಸಬೇಕಾಗುತ್ತದೆಂದು ಕೈ ಬಿಟ್ಟರಂತೆ. ಕೊನೆಗೆ ಅಭಿಷೇಕ್ ಆ ಪಾತ್ರವನ್ನು ಮಾಡಿದರು. 

ಈ ಬಗ್ಗೆ ಶಾರೂಕ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ’ಮಣಿರತ್ನಂ ಅವರ ಜೊತೆ ಕೆಲಸ ಮಾಡುವುದನ್ನು ನಾನು ಎಂಜಾಯ್ ಮಾಡುತ್ತೇನೆ. ಅವರ ಜೊತೆ ಕೆಲಸ ಮಾಡುವುದೇ ಒಂದು ಅದ್ಭುತ ಅನುಭವ. ಅವರು ನನ್ನನ್ನು ರಾವಣನನ್ನಾಗಿ ಮಾಡಲು ಇಷ್ಟಪಟ್ಟಿದ್ದರು. ಆದರೆ ನಾನು ಮನಸ್ಸು ಮಾಡಲಿಲ್ಲ. ಜೊತೆಗೆ ಇದೊಂದು ದ್ವಿಭಾಷಾ ಚಿತ್ರವಾದ್ದರಿಂದ ನನಗೆ ಕಷ್ಟವಾಯಿತು ಎಂದಿದ್ದಾರೆ.