ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಶನಿ ಧಾರಾವಾಹಿಯ ಪಾತ್ರಧಾರಿ ಬದಲಾವಣೆ | ಯಾರು ಆ ಹೊಸ ಪಾತ್ರಧಾರಿ? 

ಬೆಂಗಳೂರು (ನ. 12): ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶನಿ ಧಾರಾವಾಹಿ ಪ್ರೇಕ್ಷಕರ ಮನೆ ಗೆದ್ದಿದೆ. ಶನಿ ಪಾತ್ರಧಾರಿ ತಮ್ಮ ಅದ್ಭುತ ಅಭಿನಯದಿಂದ ಎಲ್ಲರ ಮನೆ ಮಾತಾಗಿದ್ದಾರೆ. ಇದೀಗ ಶನಿ ಪಾತ್ರಧಾರಿ ಬದಲಾಗಲಿದ್ದಾರೆ. ಇಷ್ಟು ದಿನ ಶನಿಯಾಗಿದ್ದ ಬಾಲಕ ಇನ್ಮುಂದೆ ಇರುವುದಿಲ್ಲ. ಪಾತ್ರ ಬದಲಾವಣೆ ಆಗಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕ್ಯಾಪ್ಟನ್ ಕೊಹ್ಲಿಗೇ ಅವಾಜ್ ಹಾಕಿದಳಾ ಹೆಂಡತಿ ಅನುಷ್ಕಾ?

ಇಷ್ಟು ದಿನ ಶನಿ ಪಾತ್ರವನ್ನು ಸುನೀಲ್ ಎಂಬುವವರು ನಿರ್ವಹಿಸುತ್ತಿದ್ದರು. ಇನ್ಮುಂದೆ ಬೇರೆಯವರು ನಿರ್ವಹಿಸಲಿದ್ದಾರೆ. ಸದ್ಯ ಹೊಸ ಪಾತ್ರಧಾರಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 

ಶನಿ ಜೊತೆ ಅಭಿನಯಿಸುತ್ತಿದ್ದಾ ಕಾಕರಾಜ, ಯಮಿ, ಹನುಮ ಪಾತ್ರಗಳು ದೊಡ್ಡವರಾಗಿದ್ದು, ಇನ್ಮುಂದೆ ಆ ಪಾತ್ರಗಳು ಬದಲಾಗಲಿದೆ. ಬಾಲಕಲಾವಿದರ ಅಧ್ಯಾಯ ಮುಕ್ತಾಯಗೊಂಡಿದ್ದು ಯೌವನದ ಕಥೆ ಶುರುವಾಗಲಿದೆ. 

ಶನಿ ಧಾರಾವಾಹಿಯ ಹೊಸ ಪ್ರೋಮೋ ಹೀಗಿದೆ.