ಕನ್ನಡ ಸೀರಿಯಲ್ ಲೋಕದಲ್ಲಿ ಶನಿ ಧಾರಾವಾಹಿ ಬಹಳ ಫೇಮಸ್ಸು. ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ. ಈ ಧಾರಾವಾಹಿಯ ಶನಿ, ಕಾಕರಾಜ ಹಾಗೂ ಅಂಜನೀಪುತ್ರ ಪಾತ್ರಧಾರಿಗಳು ಬದಲಾಗಲಿದ್ದಾರೆ.
ಬೆಂಗಳೂರು (ಆ. 08): ಕನ್ನಡ ಸೀರಿಯಲ್ ಲೋಕದಲ್ಲಿ ಶನಿ ಧಾರಾವಾಹಿ ಬಹಳ ಫೇಮಸ್ಸು. ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ. ಈ ಧಾರಾವಾಹಿಯ ಶನಿ, ಕಾಕರಾಜ ಹಾಗೂ ಅಂಜನೀಪುತ್ರ ಪಾತ್ರಧಾರಿಗಳು ಬದಲಾಗಲಿದ್ದಾರೆ.
ಶನಿಧಾರಾವಾಗಿಯ ಮೊದಲ ಭಾಗ ಮುಕ್ತಾಯಗೊಂಡಿದೆ. ಎರಡನೇ ಭಾಗ ಶುರುವಾಗಬೇಕಿದೆ. ಮೊದಲಾರ್ಧದಲ್ಲಿ ಬಾಲ್ಯಾವಸ್ಥೆ ಮುಕ್ತಾಯಗೊಂಡಿದೆ. ಯೌವನಾವಸ್ಥೆ ಶುರುವಾಗಬೇಕಿದೆ. ಹಾಗಾಗಿ ಪಾತ್ರಧಾರಿಗಳು ಬದಲಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸದ್ಯಕ್ಕೆ ಶನಿ ಪಾತ್ರವನ್ನು ಸುನೀಲ್ ಕುಮಾರ್ ಮಾಡುತ್ತಿದ್ದಾರೆ. ಕಾಕರಾಜ ಪಾತ್ರವನ್ನು ವಸಂತ್ ಮಾಡುತ್ತಿದ್ದಾರೆ. ಅವರ ಪಾತ್ರಧಾರಿ ಬದಲಾಗಲಿದ್ದಾರೆ. ಇದು ಹಿಂದಿಯ ಕರ್ಮಫಲ ದಾತ ಶನಿ ಧಾರಾವಾಹಿಯ ಕನ್ನಡ ವರ್ಸನ್.
