ಆಶ್ರಮದಲ್ಲಿ ಬೆಳೆದು ಕಿರುತೆರೆಯ ಸೂಪರ್‌ಸ್ಟಾರ್ ಆದ ಶನಿ

First Published 20, Mar 2018, 10:42 AM IST
Shani Serial Actor become superstar
Highlights

ಅದು ಚಾಮರಾಜನಗರ ದೀನಬಂಧು ಆಶ್ರಮ. ಜಿ.ಎಸ್. ಶಿವರುದ್ರಪ್ಪ  ಅವರ ಮಗ ಜೈದೇವ್ ಈ ಆಶ್ರಮ ನಡೆಸುತ್ತಾರೆ. ಅಲ್ಲಿ ಬೆಳೆದ ಬಾಲಕ  ಈಗ ಇಡೀ ರಾಜ್ಯದ ಮನೆಮಾತು. ಅವನ ಹೆಸರು ಸುನೀಲ್. ಕಲರ್ಸ್  ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಶನಿ’ ಧಾರಾವಾಹಿಯ ಶನಿ ಪಾತ್ರಧಾರಿ. ಈ ಧಾರಾವಾಹಿಗೆ ಸೆಲೆಕ್ಟ್ ಆದಾಗ ಎಸ್‌ಎಸ್‌ಎಲ್‌ಸಿ ಪಾಸಾಗಿದ್ದ. ಈಗ ದೂರಶಿಕ್ಷಣದ ಮೂಲಕ ಪಿಯುಸಿ ಮಾಡುತ್ತಿದ್ದಾನೆ. 

ಬೆಂಗಳೂರು (ಮಾ. 20): ಅದು ಚಾಮರಾಜನಗರ ದೀನಬಂಧು ಆಶ್ರಮ. ಜಿ.ಎಸ್. ಶಿವರುದ್ರಪ್ಪ  ಅವರ ಮಗ ಜೈದೇವ್ ಈ ಆಶ್ರಮ ನಡೆಸುತ್ತಾರೆ. ಅಲ್ಲಿ ಬೆಳೆದ ಬಾಲಕ  ಈಗ ಇಡೀ ರಾಜ್ಯದ ಮನೆಮಾತು. ಅವನ ಹೆಸರು ಸುನೀಲ್. ಕಲರ್ಸ್  ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಶನಿ’ ಧಾರಾವಾಹಿಯ ಶನಿ ಪಾತ್ರಧಾರಿ. ಈ ಧಾರಾವಾಹಿಗೆ ಸೆಲೆಕ್ಟ್ ಆದಾಗ ಎಸ್‌ಎಸ್‌ಎಲ್‌ಸಿ ಪಾಸಾಗಿದ್ದ. ಈಗ ದೂರಶಿಕ್ಷಣದ ಮೂಲಕ ಪಿಯುಸಿ ಮಾಡುತ್ತಿದ್ದಾನೆ. 

ಅವಕಾಶ ಸಿಕ್ಕಿದ್ದು ಹೇಗೆ?
ನಂಗೆ ಆ್ಯಕ್ಟಿಂಗ್‌ನಲ್ಲಿ ಅಂಥ ಆಸಕ್ತಿ ಇರಲಿಲ್ಲ. ನಟನೆ ಗೊತ್ತಿತ್ತು ಅಷ್ಟೇ. ಡಾನ್ಸ್ ಅಂದ್ರೆ ಬಹಳ ಇಷ್ಟ’ ಅನ್ನೋ ಸುನೀಲ್‌ಗೆ ‘ಶನಿ’ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದು ಆಕಸ್ಮಿಕವಾಗಿ. ಕಲೆಯಲ್ಲಿ ಈ ಹುಡುಗನಿಗಿರುವ ಆಸಕ್ತಿಯನ್ನು ಗಮನಿಸಿ ಅನಾಥಾಶ್ರಮ ಉಡುಪಿ ಮಣಿಪಾಲದಲ್ಲಿ ಯಕ್ಷ ಗುರು ಸಂಜೀವ  ಸುವರ್ಣ ಅವರ ಬಳಿ ಯಕ್ಷಗಾನ ಕಲಿಕೆಗೆ ಕಳುಹಿಸಿದ್ದರು. ಇತ್ತ ‘ಶನಿ’ ಸೀರಿಯಲ್‌ಗೆ ರಾಜ್ಯಾದ್ಯಂತ 400 ರಷ್ಟು ಮಕ್ಕಳನ್ನು ಆಡಿಷನ್  ಮಾಡಿದ್ದ ಧಾರಾವಾಹಿಯ ಕಾಸ್ಟಿಂಗ್ ಡೈರೆಕ್ಟರ್  ದೀಪಕ್‌'ಗೆ, ಯಾರೊಬ್ಬರೂ ಪಾತ್ರಕ್ಕೆ ಸರಿ ಹೊಂದುವವರು ಸಿಗದೇ, ಕೊನೆಗೆ ಅನಾಥಾಲಯದ ಬಾಲಕರನ್ನು ಸಂದರ್ಶಿಸುತ್ತಿದ್ದರು. ದೀನಬಂಧು ಆಶ್ರಮಕ್ಕೆ ಹೋದಾಗ ಸುನೀಲ್ ಬಗ್ಗೆ ತಿಳಿಯಿತು. ಮಣಿಪಾಲಕ್ಕೆ ಹೋಗಿ  ಅಡಿಶನ್ ಮಾಡಿದರು.
ಒಂದೇ ಟೇಕ್!
ಅದು ಆರೇಳು ವಾಕ್ಯದ ಸುದೀರ್ಘ  ಸಂಭಾಷಣೆ. ಸುನೀಲ್‌ಗೆ ಕಥೆ ಬಗ್ಗೆಯಾಗಲೀ,  ಪಾತ್ರದ ಬಗ್ಗೆಯಾಗಲೀ ಹೆಚ್ಚೇನೂ ಹೇಳಲಿಲ್ಲ. ಬರೀ ಸನ್ನಿವೇಶವನ್ನು ವಿವರಿಸಿದ್ದಷ್ಟೇ. ಈ ಹುಡುಗನಿಗೆ ಸೀರಿಯಲ್, ಅದಕ್ಕೆ ನಡೆಸುವ  ಆಡಿಷನ್ ಬಗೆಗೆ ಏನೊಂದೂ ಗೊತ್ತಿಲ್ಲ. ಟಿವಿ ನೋಡ್ತಿದ್ದದ್ದು ಎಕ್ಸಾಂ ಇಲ್ಲದ ಭಾನುವಾರದಲ್ಲಿ ಮಾತ್ರ. ಉಳಿದಂತೆ ಓದು, ಕಲೆಯ ಬಗ್ಗೆಯೇ ಕಲಿಕೆ. ಆದರೆ, ನಟನೆ ಒಂಚೂರು ಗೊತ್ತಿತ್ತು.
‘ಆ್ಯಕ್ಷನ್’ ಅಂದಿದ್ದೇ, ಏಳು ವಾಕ್ಯಗಳ ಆ ಸುದೀರ್ಘ ಸಂಭಾಷಣೆಯನ್ನು ಪಟಪಟನೆ ಹೇಳಿದ. ಮೊದಲ ಟೇಕ್ ಓಕೆ ಆಯ್ತು. ಆಶ್ರಮದಲ್ಲಿ ಬೆಳೆದು ಕಿರುತೆರೆಯ
ಸೂಪರ್‌ಸ್ಟಾರ್ ಆದ ಶನಿ ಅಲ್ಲಿಯವರೆಗೆ ಆಡಿಷನ್ ಮಾಡಿದ  ಹುಡುಗರಿಗಿಂತ ಭಿನ್ನವಾಗಿದ್ದ, ನಟನೆಯಲ್ಲಿ ಹೊಸತನ ಇತ್ತು. ಆಡಿಷನ್‌ಗೆ ಬಂದವರಿಗೆ ಈ ಹುಡುಗನೇ ಶನಿ ಪಾತ್ರಧಾರಿ ಅನಿಸಿಬಿಟ್ಟಿತು.

ಶನಿಯ ಬಗ್ಗೆಯೇ ಗೊತ್ತಿರಲಿಲ್ಲ!
ಆಡುಮಾತಿನಲ್ಲಿದ್ದ ಈತನ ಭಾಷೆಯನ್ನು ಗ್ರಾಂಥಿಕವಾಗಿಸಿದ್ದು ಬಿಟ್ಟರೆ, ಬೇರೆ ಯಾವ ಗ್ರೂಮಿಂಗ್ ಅನ್ನೂ ಮಾಡಿಲ್ಲ. ತನ್ನಷ್ಟಕ್ಕೇ ತಾನೇ ಕಲಿತುಕೊಳ್ಳುತ್ತ ಬೆಳೆಯುತ್ತಿದ್ದಾನೆ ಸುನೀಲ್. ‘ಮೊದಲ ಸಲ ಡೈಲಾಗ್ ಒಪ್ಪಿಸುವಾಗ ಏನೂ ಅನಿಸಿಲ್ಲ. ನನಗಾಗ ಶನಿ ಅಂತ ಒಬ್ಬ ದೇವರಿದ್ದಾನೆ ಅನ್ನೋದೂ ಗೊತ್ತಿರಲಿಲ್ಲ. ಈಗಲೂ ಶನಿ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಕತೆ ಸ್ವಲ್ಪ ಗೊತ್ತಾಗಿದೆ. ಶೂಟಿಂಗ್‌ನಲ್ಲಿ ಆ ಸೀನ್ ಏನು ಅಂತ ವಿವರಿಸ್ತಾರೆ ಅಷ್ಟೇ’ ಎಂದು ಮುಗ್ಧವಾಗಿ ಹೇಳುತ್ತಾನೆ.

ಜಾಲಿ ಹುಡುಗ ಸುನೀಲ್ ಶನಿ ಕಾಸ್ಟ್ಯೂಮ್ ಹಾಕಿದ ಕೂಡಲೇ ಬದಲಾಗ್ತಾನೆ!
ಗೆಳೆಯರ ಜೊತೆಗೆ ಜಾಲಿಯಾಗಿದ್ದುಕೊಂಡು, ಆ ವಯಸ್ಸಿನ ಹುಡುಗರಂತೆ ಚಟುವಟಿಕಯಿಂದಿರುವ ಸುನೀಲ್ ‘ಶನಿ’ ಕಾಸ್ಟ್ಯೂಮ್ ಹಾಕಿದ ಕೂಡಲೇ ಬದಲಾಗ್ತಾನೆ. ಈ ಚೇಂಜ್ ಅನ್ನು ಸ್ವತಃ ಈ ಧಾರಾವಾಹಿಯ ಕಾಸ್ಟಿಂಗ್ ಡೈರೆಕ್ಟರ್ ದೀಪಕ್ ಅವರೂ ಗಮನಿಸಿದ್ದಾರೆ. ಅಲ್ಲಿಯವರೆಗೆ ತಮಾಷೆಯಾಗಿದ್ದ ಹುಡುಗ ಏಕ್ದಂ ಸೀರಿಯಸ್ ಆಗಿಬಿಡು ತ್ತಾನೆ. ಮುಖದಲ್ಲಿ ಸೂಕ್ಷ್ಮ ವ್ಯತ್ಯಾಸ ಕಾಣುತ್ತೆ. ಸಂಪೂರ್ಣ ತಲ್ಲೀನವಾಗಿ ಪಾತ್ರವೇ ಆಗಿ ಬಿಡುವ ಈ ಹುಡುಗ ಅಭಿನಯದಲ್ಲಾಗಲೀ, ಸಂಭಾಷಣೆ ಒಪ್ಪಿಸುವುದರಲ್ಲಾಗಲೀ ಒಮ್ಮೆಯೂ ಹಿಂದೆ ಬಿದ್ದಿದ್ದಿಲ್ಲ. ದಿನದಿಂದ ದಿನಕ್ಕೆ ಇಂಪ್ರೂವ್ಮೆಂಟ್ ಮಾಡ್ತಾನೇ ಇದ್ದಾನೆ. ಆದರೆ ಈ ಸಂಗತಿ ಸುನೀಲ್ ಗಮನಕ್ಕೆ ಬಂದಿಲ್ಲ. ತಾನು ಅಭಿನಯಿಸ್ತೀನಿ ಅಷ್ಟೇ, ಬೇರೇನೂ ತಿಳಿದಿಲ್ಲ ಅಂತಾನೆ. ಆತನಿಗೆ ತನ್ನ ಅಭಿನಯವನ್ನು ರಾಜ್ಯದ ಮನೆಮನೆ ಮಂದಿ ಕೊಂಡಾಡುವ ಬಗ್ಗೆಯಾಗಲೀ, ತಾನೊಬ್ಬ ಸ್ಟಾರ್ ಬಾಲನಟನಾಗಿರುವ ಬಗ್ಗೆಯಾ
ಗಲೀ ಹೆಚ್ಚು ತಿಳಿದಿಲ್ಲ. ಆತ ಹೆಚ್ಚಿನ ಸಮಯ ಇಲ್ಲಿಲ್ಲದೇ ಇರುವುದೂ ಇದಕ್ಕೊಂದು ಕಾರಣ.
ಮುಂಬೈಯಲ್ಲೇ ವಾಸ್ತವ್ಯ
ಈ ಸೀರಿಯಲ್ ಸೆಟ್ ಇರುವುದು ಮಹಾರಾಷ್ಟ್ರದ  ಗುರ್‌ಗಾಂವ್‌ನಲ್ಲಿ. ಈ ಹುಡುಗನೂ ಸೇರಿದಂತೆ  ಮುಖ್ಯಪಾತ್ರಧಾರಿಗಳಿಗೆ ಅಲ್ಲಿಯೇ ವಾಸ್ತವ್ಯ ಕಲ್ಪಿಸಲಾಗಿದೆ. ಎಲ್ಲ ಸೌಲಭ್ಯವನ್ನೂ ನೀಡಲಾಗಿದೆ. ತಿಂಗಳಲ್ಲಿ ಒಮ್ಮೆ ಐದು ದಿನಗಳ ರಜೆ ಸಿಗುತ್ತದೆ. ಆಗ ಸುನೀಲ್ ಚಾಮರಾಜನಗರದ ತನ್ನ ಆಶ್ರಮಕ್ಕೆ ಹೋಗುತ್ತಾನೆ. ಅಲ್ಲಿ ಹಾಗೂ ಯಕ್ಷಗಾನ ಕಲಿಯುವ ಮಣಿಪಾಲದಲ್ಲಿ ಆತನ ಅಭಿನಯವನ್ನು ಮೆಚ್ಚುವ ಜೊತೆಗೆ ಯಾವ ರೀತಿ ಇಂಪ್ರೂವ್ ಆಗ್ಬೇಕು ಅನ್ನೋದನ್ನೂ ಹೇಳ್ತಾರೆ. ಅದನ್ನೆಲ್ಲ ಶ್ರದ್ಧೆಯಿಂದ ಕೇಳಿಸಿ ಕೊಂಡು ಬದಲಾವಣೆ ಮಾಡಿಕೊಳ್ಳುತ್ತಾನೆ.

ದೇವರನ್ನು ನಂಬುವ ಹುಡುಗ
ಸುನೀಲ್‌ಗೆ ದೇವರ ಬಗ್ಗೆ ನಂಬಿಕೆ ಇದೆ. ಈತ ಹನುಮಂತನ ಭಕ್ತ. ದಿನಾ ದೇವರಿಗೆ ಕೈ  ಮುಗಿಯೋದುಂಟು. ತಾನು ಪಾತ್ರ ಮಾಡುವ ‘ಶನಿ’ ಯ ಬಗ್ಗೆ ಮಾತ್ರ ಈತನಿಗೆ ಗೊತ್ತಾದದ್ದು  ಸೀರಿಯಲ್‌ಗೆ ಬಂದಾಗಲೇ. ಹಾಗಾಗಿ ಅಂಥ ಭಕ್ತಿ ಅಂತೇನಿಲ್ಲ. ಆದರೆ ತನ್ನ ಪಾತ್ರದ ಬಗ್ಗೆ ಪ್ರೀತಿ ಇದೆ. 

loader