ಬಾಲಿವುಡ್ ನಟ ಶಾಹಿದ್ ಕಪೂರ್ ಹೆಂಡತಿ ಮೀರಾ ರಜಪೂತ್ ಸಪ್ಟೆಂಬರ್ ತಿಂಗಳಿನ ಆರಂಭದಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಮಗುವಿಗೆ ಜೈನ್ ಕಪೂರ್ ಎಂದು ನಾಮಕರಣ ಕೂಡಾ ಮಾಡಿದ್ದರು. ಶಾಹಿದ್ ಕಪೂರ್ ತನ್ನ ಮೊದಲ ಮಗು ಮೀಶಾ ಜೊತೆ ತೆಗೆಸಿಕೊಂಡ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಸಾಮಾನ್ಯವಾಗಿ ಶೇರ್ ಮಾಡುತ್ತಿರುತ್ತಾರೆ. ಇತ್ತ ಪತ್ನಿ ಮೀರಾ ರಜಪೂತ್ ಕೂಡಾ ಬಿ-ಟೌನ್‌ನಲ್ಲಿ ಸಾಕಷ್ಟು ಬಾರಿ ಕಾಣ ಸಿಗುತ್ತಾರೆ. ಇನ್ನು ಶಾಹಿದ್ ತಮ್ಮ ಇಶಾನ್ ಖಟ್ಟರ್ ಕೂಡಾ ತನ್ನ ಅತ್ತಿಗೆಯೊಂದಿಗೆ ಆತ್ಮೀಯವಾಗಿದ್ದಾನೆ, ಇಬ್ಬರ ನಡುವಿನ ಆತ್ಮೀಯತೆಗೆ ಶುಕ್ರವಾರ ವೈರಲ್ ಆದ ವಿಡಿಯೋ ಒಂದು ಉದಾಹರಣೆಯಂತಿದೆ.

ಶುಕ್ರವಾರದಂದು ಮುಂಬೈನ ಜುಹೂನಲ್ಲಿ ಇಶಾನ್ ತನ್ನ ಅತ್ತಿಗೆ ಮೀರಾ ಜೊತೆ ಪಾರ್ಟಿಗೆ ತೆರಳಿದ್ದು, ಇಬ್ಬರೂ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಅತ್ತಿಗೆ ಹಾಗೂ ಮೈದುನ ಇಬ್ಬರೂ ಕ್ಯಾಮರಾಗೆ ಕೂಲ್ ಆಗಿಯೇ ಫೋಸ್ ನೀಡಿ, ಬಳಿಕ ತಮ್ಮ ಕಾರಿನಲ್ಲಿ ಕುಳಿತು ತೆರಳಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಅತ್ತಿಗೆಯೊಂದಿಗಿದ್ದ ಇಶಾನ್ ಕ್ಯಾಮರಾದೆದುರು ವ್ಯಕ್ತಪಡಿಸಿದ ಆ ಪ್ರಬುದ್ಧ ನಡವಳಿಕೆ ನೋಡುಗರ ಮನಗೆದ್ದಿದೆ. 

 
 
 
 
 
 
 
 
 
 
 
 
 

Nice to you today 🤪

A post shared by Mira Rajput Kapoor (@mira.kapoor) on Nov 7, 2018 at 7:44am PST