ಕರೀನಾ ಕಪೂರ್ ಜೊತೆಗಿನ ಹಳೆಯ ಎಂಎಂಎಸ್ ವಿವಾದದ ಬಗ್ಗೆ ವರ್ಷಗಳ ಬಳಿಕ ಮಾತನಾಡಿದ Shahid Kapoor, ಖಾಸಗಿತನಕ್ಕೆ ಆದ ಧಕ್ಕೆ ಮತ್ತು ಮಾನಸಿಕವಾಗಿ ಎದುರಿಸಿದ ಸಂಕಷ್ಟದ ಬಗ್ಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಬಾಲಿವುಡ್‌ನ ಹಾಟ್ ಕಪಲ್ ಆಗಿದ್ದ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅವರ ಹಳೆಯ ಎಂಎಂಎಸ್ ಲೀಕ್ ಆಗಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ವರ್ಷಗಳ ನಂತರ, ಈ ಘಟನೆಯಿಂದ ತಾನು ಹೇಗೆ ಮಾನಸಿಕವಾಗಿ ಕುಸಿದು ಹೋಗಿದ್ದೆ ಎಂದು ಶಾಹಿದ್ ಕಪೂರ್ ಹಂಚಿಕೊಂಡಿದ್ದಾರೆ.
ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಒಂದು ಕಾಲದಲ್ಲಿ ಬಾಲಿವುಡ್‌ನ ಅತಿ ಹೆಚ್ಚು ಚರ್ಚೆಯಲ್ಲಿದ್ದ ಜೋಡಿ. ಇಬ್ಬರೂ ತಮ್ಮ ಪ್ರೀತಿಯನ್ನು ಮುಚ್ಚಿಟ್ಟವರಲ್ಲ, ಸಂದರ್ಶನಗಳಲ್ಲಿ ಬಹಿರಂಗವಾಗಿಯೇ ಮಾತನಾಡುತ್ತಿದ್ದರು. ಒಬ್ಬರಿಗೊಬ್ಬರು ತಮ್ಮ ಹವ್ಯಾಸಗಳನ್ನು ಬದಲಿಸಿಕೊಳ್ಳುವಷ್ಟರ ಮಟ್ಟಿಗೆ ಪ್ರೀತಿಯಲ್ಲಿದ್ದರು.
ಆದರೆ, ಅವರ ಖಾಸಗಿ ಜೀವನದಲ್ಲಿ ನಡೆದ ಒಂದು ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇಬ್ಬರೂ ಕಿಸ್ ಮಾಡುತ್ತಿದ್ದ ಒಂದು ಎಂಎಂಎಸ್ ವಿಡಿಯೋ ಲೀಕ್ ಆಗಿತ್ತು. ಇದು ಇಬ್ಬರ ಖಾಸಗಿತನಕ್ಕೆ ಆದ ದೊಡ್ಡ ಧಕ್ಕೆ. ಈ ಘಟನೆ ನಡೆದಾಗ ಶಾಹಿದ್‌ಗೆ ಕೇವಲ 24 ವರ್ಷ. ಈ ವಿವಾದ ಅವರನ್ನು ಮಾನಸಿಕವಾಗಿ ಜರ್ಜರಿತಗೊಳಿಸಿತ್ತು.
ಎಂಎಂಎಸ್ ಲೀಕ್ ಬಗ್ಗೆ ಶಾಹಿದ್ ಹೇಳಿದ್ದೇನು?
ಮಿಡ್-ಡೇಗೆ ನೀಡಿದ ಸಂದರ್ಶನವೊಂದರಲ್ಲಿ ಶಾಹಿದ್ ಈ ಬಗ್ಗೆ ಮಾತನಾಡಿದ್ದರು. "ನನ್ನ ಖಾಸಗಿತನಕ್ಕೆ ಧಕ್ಕೆ ಆಗಿದೆ ಅನ್ನಿಸಿತ್ತು. ಏನಿದು, ಏನಾಗ್ತಿದೆ ಅಂತ ಯೋಚಿಸಿ ನಾನು ಗೊಂದಲದಲ್ಲಿದ್ದೆ. ಖಂಡಿತವಾಗಿಯೂ ಇದು ನಿಮ್ಮ ಮೇಲೆ ದೊಡ್ಡ ಪರಿಣಾಮ ಬೀರುತ್ತೆ, ಅದರಲ್ಲೂ ಆ ವಯಸ್ಸಿನಲ್ಲಿ. ಆಗಿನ್ನೂ ಹುಡುಗಿಯ ಜೊತೆ ಹೇಗೆ ಇರಬೇಕು, ಡೇಟಿಂಗ್ ಅಂದ್ರೆ ಏನು ಅಂತ ಕಲಿಯುತ್ತಿರುತ್ತೀರಿ. ಇಬ್ಬರೂ ನಟರಾಗಿ ಬೇರೆ ಬೇರೆ ಕಡೆ ಇರುತ್ತೀರಿ, ಆಗ ಇಂಥದ್ದೊಂದು ಘಟನೆ ನಡೆದರೆ ಹೇಗಿರುತ್ತೆ ಯೋಚಿಸಿ" ಎಂದು ತಮ್ಮ ನೋವನ್ನು ತೋಡಿಕೊಂಡಿದ್ದರು.
ವೈಯಕ್ತಿಕ ಜೀವನ
ಸದ್ಯ ಶಾಹಿದ್, ಮೀರಾ ರಜಪೂತ್ ಜೊತೆ ಸುಖ ಸಂಸಾರ ನಡೆಸುತ್ತಿದ್ದಾರೆ. 2015ರಲ್ಲಿ ಇವರಿಬ್ಬರು ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಶೀಘ್ರದಲ್ಲೇ ಅವರು ತಮ್ಮ 11ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ. ಈ ದಂಪತಿಗೆ ಮುದ್ದಾದ ಮಕ್ಕಳಿದ್ದಾರೆ.
ಸಿನಿಮಾ ರಂಗದಲ್ಲಿ
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಶಾಹಿದ್ ಕೊನೆಯದಾಗಿ ತ್ರಿಪ್ತಿ ಡಿಮ್ರಿ ಜೊತೆ 'ಓ ರೋಮಿಯೋ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ವಿಮರ್ಶಕರು ಮತ್ತು ಅಭಿಮಾನಿಗಳನ್ನು ಮೆಚ್ಚಿಸುವಲ್ಲಿ ವಿಫಲವಾಗಿತ್ತು. ಸದ್ಯ ಅವರು ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಜೊತೆ 'ಕಾಕ್‌ಟೇಲ್ 2' ಚಿತ್ರದಲ್ಲಿ ನಟಿಸಲಿದ್ದಾರೆ.


