ಕರಣ್ ಅರ್ಜುನ್ ಖ್ಯಾತಿಯ ಶಾರೂಕ್-ಸಲ್ಮಾನ್ ಮತ್ತೊಮ್ಮೆ ಒಟ್ಟಾಗಿ ತೆರೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
ಕರಣ್ ಅರ್ಜುನ್ ಖ್ಯಾತಿಯ ಶಾರೂಕ್-ಸಲ್ಮಾನ್ ಮತ್ತೊಮ್ಮೆ ಒಟ್ಟಾಗಿ ತೆರೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
ನಿನ್ನೆ ಸಂಜೆ ಮುಂಬೈನಲ್ಲಿ ಆಯೋಜಿಸಿದ್ದ ಸ್ಟಾರ್ ಸ್ಕ್ರೀನ್ ಅವಾರ್ಡ್-2016 ಸಮಾರಂಭದ ವೇದಿಕೆಯಲ್ಲಿ ಇವರಿಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ “ನೀವಿಬ್ಬರೂ ಮತ್ತೊಮ್ಮೆ ಒಟ್ಟಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತೀರಾ ಎನ್ನುವ ಪ್ರಶ್ನೆಗೆ, ಯಾರಾದರೂ ಸಿನಿಮಾ ಮಾಡಲು ಮುಂದಾದರೆ ನಾವಿಬ್ಬರು ಜೊತೆಯಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಶಾರೂಕ್ ಖಾನ್ ಹೇಳಿದ್ದಾರೆ.
ಖಂಡಿತ. ಇದಕ್ಕೆ ನಾನು ಕೂಡಾ ಒಪ್ಪುತ್ತೇನೆ. ಒಳ್ಳೆಯ ಕಥೆ ಸಿಕ್ಕರೆ ನಾವಿಬ್ಬರೂ ಒಟ್ಟಿಗೆ ಮತ್ತೊಮ್ಮೆ ಚಿತ್ರ ಮಾಡುತ್ತೇವೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಒಟ್ಟಾರೆಯಾಗಿ ಶಾರೂಕ್-ಸಲ್ಲುಭಾಯ್ ಜೊತೆಯಾದರೆ ಪ್ರೇಕ್ಷಕರಿಗೆ 'ಬಾದ್ ಶಾ' ಸವಿಯಲು ಸಿಗುತ್ತೆ ಅನ್ನೋ ಬಿ ಟೌನ್ ಟಾಕ್!
