ಪ್ರಖ್ಯಾತ ನಟನೊಬ್ಬನ ಪುತ್ರಿ ಬಿಕನಿಯಲ್ಲಿ ಪೋಸ್ ಕೊಟ್ಟಿದ್ನ್ನು ಇನ್ನೊಬ್ಬ ನಟಿ ಮುಕ್ತವಾಗಿ ಮೆಚ್ಚಿದ್ದಲ್ಲದೇ ನನ್ನ ಬಳಿಕ ನೀನೆ ಸುಂದರ ಎಂದು ಹಾಡಿ ಹೊಗಳಿದ್ದಾರೆ. ಏನಪ್ಪಾ ಸುದ್ದಿ ಅಂತೀರಾ ಮುಂದೆ ಓದಿ...
ವಿವಾದಗಳಿಂದ, ಮಾದಕ ಫೋಟೋಗಳಿಂದ ಸದಾ ಸುದ್ದಿ ಮಾಡುವ ಪೂನಂ ಪಾಂಡೆ ಇದೀಗ ಶಾರುಖ್ ಪುತ್ರಿ ಸುಹಾನ್ ಖಾನ್ ಬಿಕಿನಿ ಬಗ್ಗೆ ಮಾತನಾಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಸುಹಾನ್ ಖಾನ್ ಅವರ ಬಿಕಿನಿ ಫೋಟೋವನ್ನು ಶೇರ್ ಮಾಡಿದ್ದು ನನ್ನ ಬಳಿಕ ಬಿಕಿನಿಯಲ್ಲಿ ಸೆಕ್ಸಿಯಾಗಿ ಕಾಣುವುದು ಸುಹಾನ್ ಖಾನ್ ಎಂದು ಶಹಭಾಸ್ ನೀಡಿದ್ದಾರೆ.
ಇಟಲಿ ಪ್ರವಾಸದಲ್ಲಿರುವ ಶಾರೂಕ್ ಖಾನ್ ಕುಟುಂಬ ಅನೇಕ ಫೋಟೋಗಳನ್ನು ಹಂಚಿಕೊಂಡಿತ್ತು. ಇದರಲ್ಲಿ ಸುಹಾನ್ ಖಾನ್ ಅವರ ಬಿಕಿನಿ ಫೋಟೋ ವೈರಲ್ ಆಗಿತ್ತು. ತಾನು ಟಾಪ್ ಲೆಸ್ ಆಗಿರುವ ಫೋಟೋವನ್ನು ಈ ಫೋಟೋದ ಪಕ್ಕ ಹಾಕಿ ಅಪ್ ಲೋಡ್ ಮಾಡಿರುವ ಪೂನಂ ಈ ಹುಡುಗಿ ಆಕರ್ಷಕ ಮೈಮಾಟವನ್ನು ಹೊಂದಿದ್ದಾಳೆ ಎಂದಿದ್ದಾರೆ.
