ನವದೆಹಲಿ (ನ. 02): ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಗೆ ಇಂದು 53 ನೇ ಹುಟ್ಟುಹಬ್ಬದ ಸಂಭ್ರಮ. ಪತ್ನಿ, ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. 

ಶಾರೂಕ್ ಖಾನ್ ನ. 2, 1965 ರಲ್ಲಿ ನವದೆಹಲಿಯಲ್ಲಿ ಜನಿಸಿದರು. ಮೊದಲ ಐದು ವರ್ಷ ಬಾಲ್ಯ ಕಳೆದಿದ್ದು ಮಂಗಳೂರಿನಲ್ಲಿ. ಬಾಲಿವುಡ್ ನಲ್ಲಿ ಬಾದ್ ಶಾ ಎಂದೇ ಹೆಸರಾಗಿದ್ದಾರೆ.

ಸುಮಾರು 80 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 1992 ರಲ್ಲಿ ತೆರೆಕಂಡ ದೀವಾನಾ ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಟ್ಟರು. ಆ ನಂತರ ತೆರೆ ಕಂಣಡ ಡರ್, ಬಾಜಿಗರ್, ಅಂಜಾಮ್ ಚಿತ್ರಗಳು ತಕ್ಕಮಟ್ಟಿಗೆ ಹೆಸರನ್ನು ತಂದು ಕೊಟ್ಟಿತು. ಆನಂತರ ಬಂದ ಡಿಡಿಎಲ್ ಜೆ, ಕುಚ್ ಕುಚ್ ಹೋತಾ ಹೈ, ಮೊಹಬತೇ, ಕಭಿ ಖುಷಿ ಕಭಿ ಗಮ್ ಚಿತ್ರಗಳು ಸೂಪರ್ ಹಿಟ್ ಆದವು. 

ಪತ್ನಿ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದು ಹೀಗೆ 

 

ಇಂದು ಇವರ ಸಿನಿಮಾ ’ಜೀರೋ’ ಚಿತ್ರದ ಪೋಸ್ಟರ್ ಕೂಡಾ ರಿಲೀಸಾಗಿದೆ.