ಮುಂಬೈ (ನ. 02): ಬಾಲಿವುಡ್ ಬಾದಶಾಹ್ ಶಾರುಖ್ ಖಾನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು, ಸ್ನೇಹಿತರು, ಸೆಲಬ್ರಿಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.  ಈ ನಡುವೆ ಬಾಲಿವುಡ್‌ನ ಮೇರು ನಟ ಆಮಿರ್ ಖಾನ್ ತನ್ನ ಬಾಲಿವುಡ್ ಗೆಳೆಯನಿಗೆ ಶುಭಕೋರಿದ್ದು ಹೀಗೆ. 

 


ಶಾರುಖ್ ಖಾನ್ ಇಂದು ತನ್ನ 53ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಸುಮಾರು 80ಕ್ಕಿಂತಲೂ ಹೆಚ್ಚು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಶಾರುಖ್, ಕಿಂಗ್ ಆಫ್ ಬಾಲಿವುಡ್, ಕಿಂಗ್ ಖಾನ್‌ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದಾರೆ. 

1980ರ ದಶಕದಲ್ಲಿ ಟಿವಿ ಧಾರಾವಾಹಿಗಳ ಮೂಲಕ ಪರದೆ ಮೇಲೆ ಬಂದ ಶಾರುಖ್, 199೨ರಲ್ಲಿ "ದೀವಾನ" ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ತನ್ನ  25 ವರ್ಷದ ಫಿಲ್ಮ್ ಕೆರಿಯರ್‌ನಲ್ಲಿ 14 ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.