ಇತ್ತೀಚೆಗೆ ದುಬೈನಲ್ಲಿ ನಡೆದ ಚಿತ್ರ ನಿರ್ಮಾಪಕ ಅಜಯ್ ಬಿಜ್ಲಿ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಈ ಇಬ್ಬರು ನಟರು ಹಾಜರಾಗಿದ್ದರು.
ಮುಂಬೈ(ಫೆ.11): ಬಾಲಿವುಡ್ ಜನಪ್ರಿಯ ನಟರಾದ ಮಿಸ್ಟರ್ ಫರ್ಪೆಕ್ಟ್ ಖ್ಯಾತಿಯ ಆಮಿರ್ ಖಾನ್ ಮತ್ತು ಬಾಲಿವುಡ್ ಬಾದ್'ಶಾ ಶಾರುಖ್ ಖಾನ್ ಇದೇ ಮೊದಲ ಬಾರಿಗೆ ಜತೆಯಾಗಿ ಸೆಲ್ಫಿ ತೆಗೆದುಕೊಂಡಿದ್ದಾರೆ.
25 ವರ್ಷಗಳ ಬಳಿಕ ನಾವಿಬ್ಬರು ಜತೆಯಾಗಿ ತೆಗೆಸಿಕೊಂಡ ಮೊದಲ ಫೋಟೊ ಇದಾಗಿದೆ ಎಂದು ಶಾರುಖ್ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ದುಬೈನಲ್ಲಿ ನಡೆದ ಚಿತ್ರ ನಿರ್ಮಾಪಕ ಅಜಯ್ ಬಿಜ್ಲಿ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಈ ಇಬ್ಬರು ನಟರು ಹಾಜರಾಗಿದ್ದರು.
ಈ ವೇಳೆ, ಅವರು ಕ್ಲಿಕ್ಕಿಸಿಕೊಂಡ ಸೆಲ್ಫಿ ಪೋಟೊವನ್ನು ಟ್ವಿಟರ್‌ನಲ್ಲಿ ಹಾಕಿರುವ ಶಾರುಖ್ (51) ‘ದಂಗಲ್’ ಸ್ಟಾರ್ ಜತೆಗಿನ ಸೆಲ್ಫಿ ಎಂದು ಟ್ವೀಟ್ ಮಾಡಿದ್ದಾರೆ. ಸಾರ್ವಜನಿಕ ವಲಯದಲ್ಲಿ ತಾವಿಬ್ಬರೂ ಎಂದೂ ಸ್ನೇಹಿತರೆಂದು ಹೇಳಿಕೊಳ್ಳದ ಹಿನ್ನೆಲೆಯಲ್ಲಿ ಈ ಸೆಲ್ಫಿಗೆ ಹೆಚ್ಚು ಮಹತ್ವ ಪಡೆದುಕೊಂಡಿದೆ.