ನಟಿ ಶಬಾನಾ ಆಜ್ಮಿ ನಿರ್ಭಿಡೆ ಮಾತಿಗೆ ಹೆಸರುವಾಸಿ. ನೇರ , ನಿಷ್ಠುರ ಮಾತಿಗೆ ಹೆಸರಾದವರು. ಪ್ರಧಾನಿ ಮೋದಿ ಅಭೂತಪೂರ್ವ ಗೆಲುವಿಗೆ ಶಬಾನಾ ಅಭಿನಂದನೆ ಸಲ್ಲಿಸಿದ್ದು ಟ್ರೋಲ್ ಆಗಿದೆ. 

ಭಾರತದ ಮತದಾರರು ಸ್ಪಷ್ಟ ಜನಾದೇಶ ನೀಡಿದ್ದಾರೆ. ಕಂಗ್ರಾಚುಲೇಶನ್ಸ್ ಮೋದಿ ಕಿ ಎಂದು ಟ್ವೀಟ್ ಮಾಡಿದ್ದರು. ಇದನ್ನು ಟ್ರೋಲ್ ಮಾಡುತ್ತಿದ್ದಾರೆ. 

 

ಅರೇ! ಇದರಲ್ಲೇನಿದೆ? ಮೋದಿ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದು ತಪ್ಪಾ ಎಂದು ಪ್ರಶ್ನೆ ಏಳಬಹುದು. ಅದಕ್ಕೆ ಇಲ್ಲಿದೆ ಉತ್ತರ. 

ಕೆಲದಿನಗಳ ಹಿಂದೆ ಶಬಾನಾ ಆಜ್ಮಿ, ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದು ಹೇಳಿ ಸುದ್ದಿಯಾಗಿದ್ದರು. ನಂತರ ನಾನು ಈ ರೀತಿ ಹೇಳಿಲ್ಲ. ಇದು ಸುಳ್ಳು ಸುದ್ಧಿ ಎಂದು ತೇಪೆ ಹಚ್ಚುವ ಪ್ರಯತ್ನ ಮಾಡಿದ್ದರು. ಈಗ ಮೋದಿ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದು ಟ್ರೋಲ್ ಗೆ ಆಹಾರವಾಗಿದೆ. 

’ಯಾವಾಗ ಭಾರತ ಬಿಡುತ್ತೀರಿ’ ಎಂದು ಕೆಲವರು ಕಾಲೆಳೆದಿದ್ದಾರೆ.