ಸೆಕ್ಸ್‌ಗೆ ಒಪ್ಪಿದ್ರಷ್ಟೇ ಜೂನಿಯರ್‌ಗಳಿಗೆ ಮಲಯಾಳಂ ಸಿನಿಮಾಗಳಲ್ಲಿ ಚಾನ್ಸ್..!
ಸೆಕ್ಸ್‌ಗೆ ಒಪ್ಪಿದರೆ ಮಾತ್ರ ಜೂನಿಯರ್ ನಟರಿಗೆ ಸಿನಿಮಾದಲ್ಲಿ ಅವಕಾಶ ನೀಡಲಾಗುತ್ತದೆ. ಚಿತ್ರರಂಗದಲ್ಲಿ ಮುಂದುವರಿಯಬೇಕಾದರೆ ಎಲ್ಲದಕ್ಕೂ ಅಡ್ಜಸ್ಟ್ ಮಾಡಿಕೊಳ್ಳಬೇಕು ಹಾಗೂ ರಾಜಿ ಮಾಡಿಕೊಳ್ಳಬೇಕು ಎಂದು ಕಿರಿಯ ನಟರೇ ತನಗೆ ತಿಳಿಸಿದ್ದಾರೆ ಎಂಬ ಮಾಹಿತಿ ವರದಿಯಲ್ಲಿದೆ. 233 ಪುಟಗಳ ವರದಿಯನ್ನು ಆರ್‌ಟಿಐನಡಿ ಬಿಡುಗಡೆ ಮಾಡಲಾಗಿದ್ದು, ಸಂಚಲನಕ್ಕೆ ಕಾರಣವಾಗಿದೆ.
ತಿರುವನಂತಪುರ(ಆ.20): ನವನವೀನ ಚಿತ್ರಗಳಿಂದ ಗಮನಸೆಳೆದಿರುವ ಮಲಯಾಳ ಚಿತ್ರರಂಗವು ನಿರ್ದೇಶಕರು, ನಿರ್ಮಾಪಕರು ಹಾಗೂ ಪ್ರಮುಖ ನಟರನ್ನು ಒಳಗೊಂಡ 15 ಪುರುಷರ ಮಾಫಿಯಾ ಕಪಿಮುಷ್ಟಿಯಲ್ಲಿದೆ. ಯಾರನ್ನು ಸಿನಿಮಾಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನು ಇದೇ ಗುಂಪು ನಿಯಂತ್ರಿಸುತ್ತದೆ ಎಂದು ಚಿತ್ರರಂಗದಲ್ಲಿನ ಮಹಿಳಾ ಶೋಷಣೆ ಕುರಿತು ಅಧ್ಯಯನ ನಡೆಸಲು ಕೇರಳ ಸರ್ಕಾರ ರಚನೆ ಮಾಡಿದ್ದ ನ್ಯಾ। ಹೇಮಾ ಸಮಿತಿ ಸ್ಫೋಟಕ ವರದಿ ನೀಡಿದೆ.
ಸೆಕ್ಸ್‌ಗೆ ಒಪ್ಪಿದರೆ ಮಾತ್ರ ಜೂನಿಯರ್ ನಟರಿಗೆ ಸಿನಿಮಾದಲ್ಲಿ ಅವಕಾಶ ನೀಡಲಾಗುತ್ತದೆ. ಚಿತ್ರರಂಗದಲ್ಲಿ ಮುಂದುವರಿಯಬೇಕಾದರೆ ಎಲ್ಲದಕ್ಕೂ ಅಡ್ಜಸ್ಟ್ ಮಾಡಿಕೊಳ್ಳಬೇಕು ಹಾಗೂ ರಾಜಿ ಮಾಡಿಕೊಳ್ಳಬೇಕು ಎಂದು ಕಿರಿಯ ನಟರೇ ತನಗೆ ತಿಳಿಸಿದ್ದಾರೆ ಎಂಬ ಮಾಹಿತಿ ವರದಿಯಲ್ಲಿದೆ. 233 ಪುಟಗಳ ವರದಿಯನ್ನು ಆರ್‌ಟಿಐನಡಿ ಬಿಡುಗಡೆ ಮಾಡಲಾಗಿದ್ದು, ಸಂಚಲನಕ್ಕೆ ಕಾರಣವಾಗಿದೆ.
ಮಲಯಾಳ ಚಿತ್ರರಂಗದಲ್ಲಿ ‘ಕಾಸ್ಟಿಂಗ್ ಕೌಚ್’ (ಸಿನಿಮಾದಲ್ಲಿ ಅವಕಾಶ ನೀಡಲು ನಟಿಯರನ್ನು ಲೈಂಗಿಕವಾಗಿ ಶೋಷಿಸುವುದು) ಇದೆ. ತಮಗೆ ಯಾರು ಸಹಕರಿಸುತ್ತಾರೋ ಅವರನ್ನು ಒಂದು ಗುಂಪು ಮಾಡಲಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
Pratham: ಒಳ್ಳೇ ಹುಡ್ಗ ಪ್ರಥಮ್ ಬಿಚ್ಚಿಟ್ಟ ರಹಸ್ಯ ಕೇಳಿ ಶಿವಣ್ಣಾನೇ ತಬ್ಬಿಬ್ಬು!
ರಾತ್ರಿ ವೇಳೆ ನಟಿಯರು ತಂಗಿದ್ದಾಗ ಅವರ ಕೋಣೆಯ ಬಾಗಿಲನ್ನು ಪದೇ ಪದೇ ಬಡಿಯಲಾಗುತ್ತದೆ. ಅವರು ತೆಗೆಯದಿದ್ದರೆ ಇನ್ನೂ ಜೋರಾಗಿ ಬಡಿಯಲಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಬಾಗಿಲೇ ಮುರಿದು ಬೀಳಬಹುದು ಎಂಬಂತೆ ಅದನ್ನು ಬಡಿಯಲಾಗುತ್ತದೆ ಎಂದು ನಟಿಯರು ತನಗೆ ತಿಳಿಸಿದ್ದಾರೆ ಎಂದು ಆಯೋಗ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಮಲಯಾಳ ಚಿತ್ರರಂಗ ಕ್ರಿಮಿನಲ್ ಹಾಗೂ ಸ್ತ್ರೀದ್ವೇಷಿಗಳಿಂದ ಪ್ರಭಾವಿತವಾಗಿದೆ. 15 ಮಂದಿಯ ಮಾಫಿಯಾ ತಮ್ಮ ವಿರುದ್ಧ ದನಿ ಎತ್ತುವವರ ಭವಿಷ್ಯವನ್ನೇ ಹಾಳು ಮಾಡುವ ಶಕ್ತಿ ಹೊಂದಿದೆ. ಈ ಮಾಫಿಯಾದಲ್ಲಿ ಪ್ರಮುಖ ನಟರೂ ಇದ್ದಾರೆ ಎಂದು ಹೇಳಿದೆ.
ದಿನಾ ಬಟ್ಟೆ ಹಾಕಿ ಬೋರಾಯ್ತು ಎಂದು ಹೀಗಾ ಮಾಡೋದು? ಗಾಯಕಿ ನಡೆಗೆ ಫ್ಯಾನ್ಸ್ ದಿಲ್ ಖುಷ್!
ಶೋಷಣೆಗೆ ಒಳಗಾದರೂ ನಟಿಯರು ಪೊಲೀಸರಿಗೆ ದೂರು ನೀಡಲು ನಿರಾಕರಿಸುವಂತಹ ಪರಿಸ್ಥಿತಿ ಇದೆ. ಯಾರಾದರೂ ದೂರು ನೀಡಿದರೆ ಪರಿಣಾಮ ಗಂಭೀರವಾಗಿರುತ್ತದೆ. ದೂರುದಾರರ ಬಾಯಿ ಮುಚ್ಚಿಸಲಾಗುತ್ತದೆ. ಅವರ ಕುಟುಂಬವನ್ನೂ ಗುರಿಯಾಗಿಸಲಾಗುತ್ತದೆ ಎಂದು ಹೇಳಿದೆ.
ಏನಿದು ಸಮಿತಿ?:
2017ರಲ್ಲಿ ಚಿತ್ರನಟಿಯೊಬ್ಬರ ಮೇಲೆ ನಟ ದಿಲೀಪ್ ತಂಡದಿಂದ ಲೈಂಗಿಕ ದೌರ್ಜನ್ಯ ನಡೆದಿತ್ತು. ಅದು ವ್ಯಾಪಕ ಸಂಚಲನಕ್ಕೆ ಕಾರಣವಾಗಿತ್ತು. ಹೀಗಾಗಿ ಚಿತ್ರರಂಗದಲ್ಲಿನ ಲೈಂಗಿಕ ಶೋಷಣೆ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಹೇಮಾ ಸಮಿತಿಯನ್ನು ರಚಿಸಲಾಗಿತ್ತು.