ಬೆಂಗಳೂರು (ಆ. 23): ಮೀಟೂ ಆರೋಪದ ಹಿನ್ನಲೆಯಲ್ಲಿ ಅರ್ಜುನ್ ಸರ್ಜಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸಬೇಕೆಂದು ಕೋರಿ ನಟಿ ಶೃತಿ ಹರಿಹರನ್ ಸಲ್ಲಿಸಿದ್ದ ಅರ್ಜಿಯನ್ನು ನಗರ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. 

ವರಮಹಾಲಕ್ಷ್ಮೀ ಹಬ್ಬಕ್ಕೆ ಶೃತಿ ಹರಿಹರನ್ ಮನೆಗೆ ‘ಮಹಾಲಕ್ಷ್ಮೀ’!

’ವಿಸ್ಮಯ’ ಚಿತ್ರದ ಶೂಟಿಂಗ್ ವೇಳೆ ಅರ್ಜುನ್ ಸರ್ಜಾ ಅನುಚಿತವಾಗಿ ವರ್ತಿಸಿದ್ದರು ಎಂದು ಶೃತಿ ಹರಿಹರನ್ ಮೀ ಟೂ ಆರೋಪ ಮಾಡಿದ್ದರು. ತಮ್ಮ ವಿರುದ್ಧ ಮಾಡಿದ ಗುರುತರ ಆರೋಪವನ್ನು ಸರ್ಜಾ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಶೃತಿ ಹರಿಹರನ್ ವಿರುದ್ಧ 5 ಕೋಟಿ ರೂ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದರು. ಈ ಅರ್ಜಿಯನ್ನು ವಜಾಗೊಳಿಸುವಂತೆ ಶೃತಿ ಹರಿಹರನ್ ಕೋರಿದ್ದರು.