ನಾತಿಚರಾಮಿ ಖ್ಯಾತಿಯ ಶೃತಿ ಹರಿಹರನ್ ಮನೆಯಲ್ಲಿ ಈ ಬಾರಿ ವರಮಹಾಲಕ್ಷ್ಮೀ ಹಬ್ಬದ ಡಬಲ್ ಸಂಭ್ರಮ. ವರಮಹಾಲಕ್ಷ್ಮೀ ಹಬ್ಬಕ್ಕೆ ಮನೆಯಲ್ಲಿ ಪುಟ್ಟ ಮಹಾಲಕ್ಷ್ಮೀ ಇದ್ದಾಳೆ. 

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಕನ್ನಡಕ್ಕೆ ಸುಗ್ಗಿ!

14ದಿನಗಳ ಹಿಂದೆ ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಶೃತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಅಮ್ಮ-ಮಗಳು ಇಬ್ಬರೂ ಆರಾಮಾಗಿದ್ದಾರೆ ಎಂದು ತಿಳಿದು ಬಂದಿದೆ. 

ಇಂದು ಶೃತಿ ಹರಿಹರನ್ ಗೆ ಸುದಿನ. ಅವರ ಪಾಲಿಗೆ ಇನ್ನೂ ಒಂದು ಖುಷಿ ವಿಚಾರವೆಂದರೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018 ಪ್ರಕಟವಾಗಿದ್ದು ನಾತಿಚರಾಮಿ ಚಿತ್ರದ ಪಾತ್ರಕ್ಕೆ ವಿಶೇಷ ತೀರ್ಪುಗಾರರ ಪ್ರಶಸ್ತಿ ಲಭಿಸಿದೆ. ಇದೂ ಕೂಡಾ ಹೆಮ್ಮೆಯ ವಿಚಾರವಾಗಿದೆ. 

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಇಲ್ಲಿದೆ ಪ್ರಶಸ್ತಿ ವಿವರ

ಒಂದು ಕಡೆ ವರಮಹಾಲಕ್ಷ್ಮೀ, ಇನ್ನೊಂದು ಕಡೆ ಮನೆಗೆ ಪುಟ್ಟಲಕ್ಷ್ಮೀ ಆಗಮನ, ಇನ್ನೊಂದು ಕಡೆ ರಾಷ್ಟ್ರೀಯ ಪ್ರಶಸ್ತಿ! ಯೋಗಾಯೋಗ ಎಂದರೆ ಇದೇ ಇರಬೇಕು ನೋಡಿ!