ನಟಿ ಜಯ ಇನ್ನಿಲ್ಲ

ಚೆನ್ನೈ(ಡಿ.5): ತಮಿಳು ಕಿರುತೆರೆ ಹಾಗೂ ಜಾಹಿರಾತುಗಳಲ್ಲಿ ನಟಿಸಿದ್ದ ನಟಿ ಜಯಶೀಲಿ(49) ತಮ್ಮ ನಿವಾಸದಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಮೂಲತಃ ಸೇಲಂನವರಾದ ಇವರು ಚೆನ್ನೈ'ನ ಪೆರಿಯಾರ್ ಸ್ಟ್ರೀಟ್'ನಲ್ಲಿ ವಾಸಿಸುತ್ತಿದ್ದರು.

ನಿನ್ನೆ ಅವರ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಹಾಸಿಗೆ ಮೇಲೆ ನಟಿಯ ದೇಹ ಬೆತ್ತಲೆಯಾಗಿ ಬಿದ್ದಿದೆ.ಮನೆಯಲ್ಲಿರುವ ಚಿನ್ನಾಭರಣಗಳು ಕೂಡ ಕಣ್ಮರೆಯಾಗಿದೆ. 2 ದಿನಗಳ ಹಿಂದೆಯೇ ಕೊಲೆಯಾಗಿರುವ ಸಾಧ್ಯತೆಯಿದ್ದು, ಪರಿಚಿತರೆ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.