ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಪೈಲ್ವಾನ ನಾಗಿ ಕುಸ್ತಿ ಅಖಾಡಕ್ಕೆ ಇಳಿಯಲಿದ್ದಾರೆ. ತೊಡೆ ತಟ್ಟಿ ನಿಲ್ಲಲಿದ್ದಾರೆ. ಈಗಾಗಲೇ ಪೈಲ್ವಾನ್ ಟೀಸರ್, ಟ್ರೇಲರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ’ಪೈಲ್ವಾನ್’ ನಾಗಿ ಸುದೀಪ್ ರನ್ನು ತೆರೆ ಮೇಲೆ ನೋಡಬೇಕೆಂದು ಅಭಿಮಾನಿಗಳನ್ನು ಕಾಯುತ್ತಿದ್ದಾರೆ. 

’ಪೈಲ್ವಾನ್’ ಬಗ್ಗೆ ಸಾಕಷ್ಟು ಕುತೂಹಲಗಳಿವೆ. ’ಪೈಲ್ವಾನ್’ ಪಾತ್ರಗಳ ಬಗ್ಗೆ, ಕಥೆ ಬಗ್ಗೆ ಏನೆಲ್ಲಾ ವಿಶೇಷತೆಗಳಿವೆ ಎಂಬ ಕುತೂಹಲ ಸಹಜವಾದದ್ದು. ಇವೆಲ್ಲದರ ಬಗ್ಗೆ ಸ್ವತಃ ಸುದೀಪ್ ಅವರೇ ಉತ್ತರಿಸಲಿದ್ದಾರೆ. ಇಂದು ಸಂಜೆ ಸುದೀಪ್ ಟ್ವಿಟರ್ ನಲ್ಲಿ ಲೈವ್ ಬರಲಿದ್ದಾರೆ. ಅಭಿಮಾನಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಅಬಿಮಾನಿಗಳು ಏನೇ ಪ್ರಶ್ನೆಗಳಿದ್ದರೂ ಕೇಳಬಹುದು ಎಂದು ಹೇಳಿದ್ದಾರೆ.