ರಾಜ್ಯದೆಲ್ಲೆಡೆ ನಿಖಿಲ್ ಕುಮಾರಸ್ವಾಮಿ ಹಾಗೂ ರಚಿತಾ ರಾಮ್ ಅಭಿನಯದ 'ಸೀತಾರಾಮ ಕಲ್ಯಾಣ' ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪ್ರಮೋಷನ್‌ನಲ್ಲಿಯೇ 'ಗೌಡ ಹುಡುಗ ಬೇಕು...' ಎಂದಿದ್ದ ರಚಿತಾ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಇದೀಗ ಇದಕ್ಕೆ ಪೂರಕವೆಂಬಂತೆ ರಚಿತಾ ಮತ್ತು ನಿಖಿಲ್ 'ಮಜಾ ಟಾಕೀಸ್'ನ ಆ್ಯಕ್ಷನ್ ಮತ್ತು ರಿಯಾಕ್ಷನ್ ಮತ್ತಷ್ಟು ಊಹಾಪೋಹಗಳಿಗೆ ಎಡೆ ಮಾಡಿ ಕೊಟ್ಟಿವೆ.

ಕಾರ್ಯಕ್ರಮಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಇಬ್ಬರೂ ಸೇಮ್ ಕಲರ್ ಡ್ರೆಸ್ ತೊಟ್ಟಿರುವುದು ಗಮನಕ್ಕೆ ಬಂತು. 'ಆಗಲೇ ನಮ್ಮಿಬ್ಬರ ಕಾಂಬಿನೇಷನ್ ಕ್ಲಾಸ್- ಮಾಸ್..' ಎಂದು ನಿಖಿಲ್ ಹೇಳಿದ್ದು ಯಾವುದರ ಸುಳಿವು ಎಂಬುವುದು ಗೊತ್ತಾಗಲಿಲ್ಲ. ಕ್ಯಾಶುಯಲ್‌ ಆಗಿ ಹೇಳಿರಬಹುದು ಎಂದು ಕೊಂಡು ಸುಮ್ಮನಾದರೆ, ಮತ್ತೆ ರಚಿತಾ ಡಯಟ್ ಬಗ್ಗೆ ಹೇಳಿದಾಗಲೂ ನಿಖಿಲ್ ಆಡಿದ ಮಾತು ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿ ಕೊಟ್ಟವು.

ಸೃಜನ್ ಲೊಕೇಶ್ ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಶೋ ಆರಂಭದಲ್ಲಿಯೇ 'ಚಿತ್ರ ಶೂಟಿಂಗ್ ವೇಳೆ ಏನು ಡಯಟ್ ಮಾಡಿದ್ರಿ? ಎಂದು ಪ್ರಶ್ನಿಸಿದ್ದರು. ರಚಿತಾ ನಗುನಗುತಾ...‘ಏನೂ ಮಾಡಿಲ್ಲ. ಯಾವಾಗಲೂ ಐಸ್‌ಕ್ರೀಮ್ ಹಾಗೂ ಚಿಕನ್ ತಿನ್ತಾ ಇದ್ದೆ. ನನಗೆ ಐಸ್ ಕ್ರೀಮ್ ತುಂಬಾ ಇಷ್ಟ. ಅದರಲ್ಲೂ ಚಾಕೊಲೇಟ್, ವೆನಿಲಾ ಸ್ಕೂಪ್ ವಿಥ್ ನಟ್ಸ್ ತುಂಬಾ ಇಷ್ಟ...’ ಎಂದರು. ಅಲ್ಲದೇ ಚಿತ್ರದ ಸೆಟ್‌ನಲ್ಲಿಯೇ ಐಸ್‌ಕ್ರೀಂ ತರಿಸಿಕೊಂಡಿದ್ದನ್ನು ಹೇಳಿಕೊಂಡರು.

ಅದಾದ ಮೇಲೆ ನಿಖಿಲ್‌ಗೆ ನಿಮಗ್ಯಾವ ಐಸ್‌ಕ್ರೀಂ ಇಷ್ಟವೆಂದು ಸೃಜನ್ ಕೇಳಿದಾಗ, ‘ನನಗೂ ಚಾಕೋಲೆಟ್ ಇಷ್ಟ. ಬೇರೆ ಏನೂ ಆಪ್ಷನ್ ಇಲ್ವಲ್ಲಾ...?’ ಎಂದು ಹೇಳಿ ನಕ್ಕರು. ರಚಿತಾಗೆ ಇಷ್ಟವಾದ ಐಸ್‌ಕ್ರೀಂ ನಿಖಿಲ್‌ಗೇಕೆ ಇಷ್ಟವಾಗಬೇಕು? ಇವರಿಗ್ಯಾಕೆ ಬೇರೆ ಫ್ಲೇವರ್ ಇಷ್ಟು ಪಡುವ ಆಪ್ಷನ್ ಇಲ್ಲವೆನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ...!

ನಿಖಿಲ್ ಕುಮಾರ್‌ನನ್ನು ಇಮಿಟೇಟ್ ಮಾಡುವುದರಲ್ಲಿ ಸಿಕ್ಕಾಪಟ್ಟೆ ಫೇಮಸ್ ಅಂತೆ ಡಿಂಪಲ್ ರಾಣಿ ರಚಿತಾ ರಾಮ್. ಕೆಲವು ದಿನಗಳ ಹಿಂದೆ ಸೀತಾರಾಮ ಕಲ್ಯಾಣ ಪ್ರೆಸ್ ಮೀಟ್‌ನಲ್ಲಿ ರಚಿತಾ ರಾಮ್ ‘ನಾವು ಗೌಡರು ಅದಿಕ್ಕೆ ಮದ್ವೆ ಆದ್ರೆ ಗೌಡರ ಹುಡುಗನನ್ನೇ ಆಗುವೆ...’ ಎಂದಿದ್ದರು. ಆ ಡೈಲಾಗ್ ಇತ್ತ ಮಜಾ ಟಾಕೀಸ್ ಮಾತು ಕಥೆಗಳು ಏಕೋ ಲಿಂಕ್ ಆಗುತ್ತಿವೆ ಎಂಬು ಅನುಮಾನ ಕನ್ನಡ ಚಿತ್ರಾಭಿಮಾನಿಗಳಿಗೆ.