ಫಸ್ಟ್‌ ಲುಕ್‌ ಫೋಟೋಸ್‌ ಸಾಕಷ್ಟುಕುತೂಹಲ ಮೂಡಿಸಿದ್ದು, ಇದು ಬ್ಯಾಚುಲರ್‌ ಹುಡುಗನ ಬಾಳ ಪಯಣದಂತೆ ಕಾಣುತ್ತಿದೆ. ಅಲ್ಲದೆ ಚಿತ್ರದ್ದೆ ‘100 % ವರ್ಜಿನ್‌’ ಎನ್ನುವ ಟ್ಯಾಗ್‌ ಲೈನ್‌ ಬೇರೆ ಇದೆ. ಹೀಗಾಗಿ ಯಂಗ್‌ ಜನರೇಷನ್‌ ಸಿನಿಮಾ ಎಂದುಕೊಂಡರೆ ತಪ್ಪು. ಎಲ್ಲರನ್ನೂ ಒಳಗೊಳ್ಳುವ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್‌ ಕತೆಯೂ ಇಲ್ಲಿದೆ. ಈ ಕಾರಣಕ್ಕೆ ಬ್ಯಾಚುಲರ್‌ ಹುಡುಗನ ಜೀವನದಲ್ಲಿ ಬರುವ ಪ್ರೇಮ ಕತೆ ಜತೆಗೆ ಕೌಟುಂಬಿಕ ನೆರಳು ಕೂಡ ಇದೆ.

ಯೂಟ್ಯೂಬ್‌ ಚಾನೆಲ್‌ ಶುರು ಮಾಡಿದ ಸತೀಶ್‌ ನೀನಾಸಂ

‘ಅಂದುಕೊಂಡಂತೆ 35 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದೇವೆ. ಒಳ್ಳೆಯ ಕಲಾವಿದರ ತಂಡ ಇದೆ. ದತ್ತಣ್ಣ, ಪದ್ಮಜಾ ರಾವ್‌, ಶಿವರಾಜ್‌ ಕೆ ಆರ್‌ ಪೇಟೆ, ಬಿರದಾರ್‌ ಹೀಗೆ ಹಲವರು ನಟಿಸಿದ್ದಾರೆ. ನಿರ್ದೇಶಕ ಚಂದ್ರಮೋಹನ್‌ ಅವರು ಚಿತ್ರದ ಪ್ರತಿಯೊಂದು ಪಾತ್ರವನ್ನು ಅದ್ಭುತವಾಗಿ ರೂಪಿಸಿದ್ದಾರೆ. ಉದಯ್‌ ಮೆಹ್ತಾ ಅವರು ಅದ್ದೂರಿಯಾಗಿ ನಿರ್ಮಾಣ ಮಾಡುವುದಕ್ಕೆ ಸಾಥ್‌ ನೀಡಿದ್ದಾರೆ. ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ನಡೆಯಲಿದ್ದು, ಒಂದು ಹಾಡಿನ ಶೂಟಿಂಗ್‌ಗೆ ಕುಲುಮನಾಲಿಗೆ ಹೋಗುವ ಸಾಧ್ಯತೆಗಳಿವೆ’ ಎನ್ನುತ್ತಾರೆ ನೀನಾಸಂ ಸತೀಶ್‌. ಇಲ್ಲಿವರೆಗೂ ಬೆಂಗಳೂರು, ಶ್ರೀರಂಗಪಟ್ಟಣ್ಣ ಮುಂತಾದ ಕಡೆ ಶೂಟಿಂಗ್‌ ಮಾಡಲಾಗಿದೆ.