Asianet Suvarna News Asianet Suvarna News

ಯೂಟ್ಯೂಬ್‌ ಚಾನೆಲ್‌ ಶುರು ಮಾಡಿದ ಸತೀಶ್‌ ನೀನಾಸಂ

ಸತೀಶ್‌ ನೀನಾಸಂರಿಂದ ಅಭಿಮಾನಿಗಳಿಗೆ ಹೊಸ್‌ ಗಿಫ್ಟ್‌  | ಸತೀಶ್‌ ಆಡಿಯೋ ಹೌಸ್‌’ ಹೆಸರಲ್ಲಿ ಯುಟ್ಯೂಬ್‌ ಚಾನೆಲ್‌ ಶುರು ಮಾಡಿದ್ದಾರೆ | 

Actor Neenasam Sathish launches new YouTube channel
Author
Bengaluru, First Published May 1, 2019, 11:57 AM IST
  • Facebook
  • Twitter
  • Whatsapp

ಬೆಂಗಳೂರು (ಮೇ. 01): ಸತೀಶ್‌ ನೀನಾಸಂ, ಅಭಿಮಾನಿಗಳಿಗೆ ಹೊಸ್‌ ಗಿಫ್ಟ್‌ ನೀಡಿದ್ದಾರೆ. ನಟನೆಯ ಜತೆಗೆಯೇ ನಿರ್ಮಾಣ ಸಂಸ್ಥೆ ಶುರು ಮಾಡಿದ್ದ ಅವರೀಗ, ‘ ಸತೀಶ್‌ ಆಡಿಯೋ ಹೌಸ್‌’ ಹೆಸರಲ್ಲಿ ಯುಟ್ಯೂಬ್‌ ಚಾನೆಲ್‌ ಶುರು ಮಾಡಿದ್ದಾರೆ.

‘ ಸತೀಶ್‌ ಆಡಿಯೋ ಹೌಸ್‌, ಇದೊಂದು ಅತ್ಯುತ್ತಮ ಲೈಬ್ರರಿ ಆಗಬಹುದು ಎಂಬ ನಿರೀಕ್ಷೆಯೊಂದಿಗೆ ಪ್ರಾರಂಭಿಸಿದ್ದೇವೆ. ಸಬ್‌ಸ್ಕ್ರೈಬ್ ಮಾಡಿ. ಶೀಘ್ರದಲ್ಲೇ ನಮ್ಮ ಮೊದಲ ಕಿರುಚಿತ್ರ ‘ ಕಾಜಿ’ ಇಲ್ಲಿ ಅಪ್‌ಲೋಡ್‌ ಆಗಲಿದೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಹೀಗೆ ಇರಲಿ’ಎಂದು ಕೇಳಿಕೊಂಡಿದ್ದಾರೆ. ಸತೀಶ್‌ ಈ ಹಿಂದೆ ಅಂದರೆ, 2014ರಲ್ಲಿ ಸತೀಶ್‌ ಮೀಡಿಯಾ ಹೌಸ್‌ ಹೆಸರಲ್ಲೊಂದು ನಿರ್ಮಾಣ ಸಂಸ್ಥೆ ಶುರು ಮಾಡಿದ್ದರು. ‘ಕಾಜಿ’ ಕಿರುಚಿತ್ರ ನಿರ್ಮಾಣ ಮಾಡಿದ್ದರು. ನಟಿ ಐಶಾನಿ ಶೆಟ್ಟಿಇದನ್ನು ನಿರ್ದೇಶಿಸಿದ್ದರು. ಹಲವು ರಾಷ್ಟ್ರೀಯ ಮಟ್ಟದ ಚಿತ್ರೋತ್ಸವಗಳಿಗೂ ಇದು ಸ್ಪರ್ಧೆ ಮಾಡಿತ್ತು. ಆದಾದ ನಂತರ ‘ ರಾಕೆಟ್‌’ ಚಿತ್ರ ನಿರ್ಮಾಣವಾಗಿ ತೆರೆ ಕಂಡಿತ್ತು. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿತ್ತು.

YouTube : SathishAudioHouse 

Follow Us:
Download App:
  • android
  • ios